ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಮನೆಯಲ್ಲಿ ಗಣೇಶನ ದರ್ಶನ ಪಡೆದ ಸಚಿನ್ ತೆಂಡೂಲ್ಕರ್ - ಆಶಿಶ್ ಶೆಲಾರ್ ಅವರ ಮನೆಯ ಗಣಪತಿ ಪೂಜೆ
🎬 Watch Now: Feature Video
By ANI
Published : Sep 28, 2023, 9:56 AM IST
|Updated : Sep 28, 2023, 1:08 PM IST
ಮುಂಬೈ: ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಅವರ ಮನೆಯ ಗಣಪತಿ ಪೂಜೆಗೆ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಆಗಮಿಸಿ ಗಣಪನ ದರ್ಶನ ಪಡೆದಿದ್ದಾರೆ. ಇದೀಗ ಸಚಿನ್ ಭೇಟಿಯ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ. ಕಾರಿನಲ್ಲಿ ಬಂದಿಳಿದ ಸಚಿನ್ನನ್ನು ಅಧ್ಯಕ್ಷ ಆಶಿಶ್ ಶೆಲಾರ್ ಬರಮಾಡಿಕೊಂಡರು. ಸಚಿನ್ ಗೋಲ್ಡ್ ಬಣ್ಣದ ಕುರ್ತಾ, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಗಣಪನ ದರ್ಶನ ಬಳಿಕ ಮತ್ತೆ ಕಾರಿನ ಬಳಿ ಆಶಿಶ್ ಶೆಲಾರ್ ಸಚಿನ್ರೊಂದಿಗೆ ಬರುವ ಮೂಲಕ ಬೀಳ್ಕೊಟ್ಟರು. ಇನ್ನು ಅಧ್ಯಕ್ಷ ಆಶಿಶ್ ಶೆಲಾರ್ ಸಚಿನ್ಗೆ ಉಜ್ಜಯಿನಿ ಮಹಕಾಳೇಶ್ವರ ಶಿವಲಿಂಗದ ಫೋಟೋವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಯೇ ಸಚಿನ್ ಭೇಟಿಯ ನೀಡಿರುವ ಫೋಟೋವನ್ನು ತಮ್ಮ ಅಧಿಕೃತ ಖಾತೆ ಎಕ್ಸ್ನಲ್ಲಿ ಅಶಿಶ್ ಪೋಸ್ಟ್ ಮಾಡಿಕೊಂಡಿದ್ದಾರೆ.
ಇನ್ನು ಮೊನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿಯೂ ಗಣಪತಿ ಪೂಜೆ ನಡೆದಿದ್ದು, ಬಾಲಿವುಡ್ ತಾರೆಯರೆಲ್ಲ ಭಾಗಿಯಾಗಿದ್ದರು. ಅದರಲ್ಲೂ ಟೈಗರ್ ಖಾನ್ ಸಲ್ಮಾನ್ ಖಾನ್ ಮತ್ತು ಕಿಂಗ್ ಖಾನ್ ಶಾರುಖ್ ಖಾನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಶಿಂಧೆ ನಿವಾಸದಲ್ಲಿ ಗಣಪತಿ ಪೂಜೆ; ಶಾರುಖ್, ಸಲ್ಮಾನ್ ಭಾಗಿ-ವಿಡಿಯೋ