ಗುಮ್ಮಟನಗರಿಯಲ್ಲಿ ಆರ್ಎಸ್ಎಸ್ ಆಕರ್ಷಕ ಪಥಸಂಚಲನ - ವಿಜಯಪುರ ನಗರ ಸಂಪೂರ್ಣ ಕೇಸರಿಮಯ
🎬 Watch Now: Feature Video
ವಿಜಯಪುರ: ವಿಜಯಪುರ ನಗರದಲ್ಲಿಂದು ಆರ್ಎಸ್ಎಸ್ ಪಥ ಸಂಚಲನ ನಡೆಯಿತು. ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿಯಿಂದ ಆರಂಭವಾಗಿ ಸಾಗಿದ ಪಥ ಸಂಚಲನದಲ್ಲಿ ಗಣವೇಷಧಾರಿಗಳು ಡ್ರಮ್ ಬಾರಿಸುತ್ತಾ ಗೋದಾವರಿ ಹೋಟೆಲ್, ಡೋಬಲೆ ಗಲ್ಲಿ, ಉಪ್ಪಲಿ ಬುರ್ಜ್, ಸರಾಫ್ ಬಜಾರ್, ರಜಪೂತ ಓಣಿ, ನಾಗೂರ ಕಾಲೇಜ್‌ವರೆಗೂ ಸಾಗಿದರು. ದಾರಿಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಪುಷ್ಪವೃಷ್ಠಿ ಮಾಡಿದರು. ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗಿದವು. ಪಥ ಸಂಚಲನ ಸಾಗುವ ಮಾರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅಂತಿಮವಾಗಿ, ನಾಗೂರು ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು.
Last Updated : Feb 3, 2023, 8:31 PM IST