ETV Bharat / state

ಮೂರು ದಶಕ ಕಳೆದರೂ ಕೈಗೂಡದ ನೀರಾವರಿ ಕನಸು: ಸಿಂಗಟಾಲೂರು ಏತ ನೀರಾವರಿ ನಂಬಿದ್ದ ರೈತರಿಗೆ ನಿರಾಸೆ - SINGHATALUR ETHA IRRIGATION PROJECT

ಯೋಜನೆಗಾಗಿ ತಂದಿರಿಸಿದ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಸ್ಥಳೀಯ ಜನಪ್ರತಿನಿಧಿಗಳು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

singhatalur-etha-irrigation-project-not-completed-even-after-three-decades
ಮೂರು ದಶಕ ಕಳೆದರೂ ಕೈಗೂಡದ ನಿರಾವರಿ ಕನಸು: ಸಿಂಗಟಾಲೂರು ಏತ ನೀರಾವರಿ ನಂಬಿದ್ದ ರೈತರಿಗೆ ನಿರಾಸೆ (ETV Bharat)
author img

By ETV Bharat Karnataka Team

Published : 3 hours ago

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯವಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಭೂಮಿಗೆ ನೀರು ಹರಿಸುವ ಭರವಸೆ ನೀಡಲಾಗಿತ್ತು. ಹಲವು ಹೋರಾಟದ ಬಳಿಕ ಕಾಮಗಾರಿ ಆರಂಭಿಸಿದ್ದರಾದರೂ ಒಂದು ಯೋಜನೆ ಮೂರು ದಶಕಗಳಾದರೂ ಪೂರ್ಣಗೊಳ್ಳದೇ ಇರುವುದರಿಂದ ಈ ಭಾಗದ ರೈತರಲ್ಲಿ ನಿರಾಸೆ ಮೂಡಿಸಿದೆ.

ಕೈಗೂಡದ ನೀರಾವರಿಗಾಗಿ ಕನಸು: ತುಂಗಭದ್ರಾ ಜಲಾಶಯದ ಮೇಲ್ಭಾಗದ ಸಿಂಗಟಾಲೂರು ಬಳಿ 18.50 ಟಿಎಂಸಿ ನೀರು ಬಳಕೆ ಮಾಡಿಕೊಂಡು ಒಟ್ಟು 2.65 ಲಕ್ಷ ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲು ಯೋಜನೆ ಸಿದ್ಧವಾಗಿದೆ. ಸಿಂಗಟಾಲೂರಿನ ಬಲದಂಡೆಯಲ್ಲಿ 40 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಯಾಗಿದೆ. ಆದರೆ, ಎಡದಂಡೆ ಭಾಗದ ಗದಗ, ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿಗಾಗಿ ಕಂಡ ರೈತರ ಕನಸು ನನಸಾಗಿಲ್ಲ.

ಮೂರು ದಶಕ ಕಳೆದರೂ ಕೈಗೂಡದ ನೀರಾವರಿ ಕನಸು: ಸಿಂಗಟಾಲೂರು ಏತ ನೀರಾವರಿ ನಂಬಿದ್ದ ರೈತರಿಗೆ ನಿರಾಸೆ (ETV Bharat)

ಈ ಭಾಗದಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಅಳವಡಿಸಲು 134 ಕೋಟಿ ರೂಪಾಯಿ ಇನ್ನೂ ಬೇಕಾಗಿದೆ. ಆದರೆ ಇಲ್ಲಿಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಸಿಂಗಟಾಲೂರ ಏತ ನಿರಾವರಿ ಯೋಜನೆಗೆ ಕೊಪ್ಪಳ, ಯಲಬುರ್ಗಾ ಮತ್ತು ಗದಗ ಜಿಲ್ಲೆಯ ಒಬ್ಬ ಶಾಸಕರ ಕ್ಷೇತ್ರ ಒಳಗೊಂಡಿದ್ದು, ಈ ಮಧ್ಯೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮೂರು ಭಾರಿ ಆಯ್ಕೆಯಾಗಿದ್ದಾರೆ. ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸಚಿವರಾಗಿ ಈಗ ಸಿಎಂ ಆರ್ಥಿಕ ಸಲಹೆಗಾರರಾಗಿದ್ದಾರೆ. ಗದಗನಲ್ಲಿ ಹೆಚ್.ಕೆ.ಪಾಟೀಲ ಪ್ರಭಾವಿ ಸಚಿವರಾಗಿದ್ದಾರೆ. ಆದರೂ ಒಂದು ಯೋಜನೆ ಪೂರ್ಣಗೊಳಿಸಲು ಮೂರು ದಶಕಗಳು ಬೇಕಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗಾಗಿ ಕ್ರೋಢೀಕರಿಸಿದ ಸಾಮಗ್ರಿಗಳು ತುಕ್ಕು ಹಿಡಿಯುತ್ತಿವೆ. ಕಾಲುವೆಗಳು ಹಾಳಾಗಿವೆ. ಈಗಲಾದರೂ ಈ ಯೋಜನೆ ಪೂರ್ಣಗೊಳಿಸಲು ಸರಕಾರದ ಮೇಲೆ ಜನಪ್ರತಿನಿಧಿಗಳು ಒತ್ತಡ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮೂರು ದಶಕಗಳಾದರೂ ಯೋಜನೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ಭಾಗದ ರೈತರು ನೀರಾವರಿಯ ಕನಸು ಕೈಬಿಟ್ಟು ತಮ್ಮ ಭೂಮಿಯನ್ನು ಸೋಲಾರ್​ ಹಾಗೂ ವಿಂಡ್ ಪವರ್ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಸಿಂಗಟಾಲೂರು ಏತ ನೀರಾವರಿಗೆ ಭೂಮಿಯೇ ಇಲ್ಲದಂತಹ ಸ್ಥಿತಿ ಬರಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.

"ಸಿಂಗಟಾಲೂರು ಏತ ನಿರಾವರಿ ಯೋಜನೆ ಸುಮಾರು 70 ರಿಂದ 75 ಸಾವಿರ ಏಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆ ಇದಾಗಿದೆ. ಜಿಲ್ಲೆಯ ಸಚಿವರು, ಶಾಸಕರಾದ ನಾವು ಸರ್ಕಾರದ ಗಮನಕ್ಕೆ ತಂದು ಈ ವಿಷಯವನ್ನು ಬೋರ್ಡ್ ಮಿಟಿಂಗ್​ನಲ್ಲಿಟ್ಟು ಹೆಚ್ಚುವರಿ ಹಣ ಬಿಡುಗಡೆಗೊಳಿಸಿ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ" ಎಂದು ಶಾಸಕ ರಾಘವೇಂದ್ರ ಹಿಟ್ನಾಳ್​​ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವೃಷಭಾವತಿ ವ್ಯಾಲಿ ಕೊಳಚೆ ನೀರು ನಿಯಂತ್ರಣಕ್ಕೆ ಸಮಗ್ರ ಯೋಜನೆ : ಬಿಬಿಎಂಪಿ ಮುಖ್ಯ ಆಯುಕ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.