LIVE Video.. ವರುಣನ ಅವಾಂತರ.. ಕ್ಷಣಮಾತ್ರದಲ್ಲೇ ಏಕಾಏಕಿ ಕುಸಿದ ಹೆದ್ದಾರಿ ಪಕ್ಕದ ರೆಸಾರ್ಟ್! - ETV Bharath Karnataka
🎬 Watch Now: Feature Video
ರುದ್ರಪ್ರಯಾಗ (ಉತ್ತರಾಖಂಡ): Resort Collapse: ಉತ್ತರ ಭಾರತದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಅನಾಹುತಗಳು ಸಂಭವಿಸುತ್ತಲೇ ಇದೆ. ಉತ್ತರಾಖಂಡ ರಾಜ್ಯದಲ್ಲಿನ ರುದ್ರಪ್ರಯಾಗದ ಕೇದಾರನಾಥ ಹೆದ್ದಾರಿ ಪಕ್ಕದಲ್ಲಿ ರೆಸಾರ್ಟ್ ಕುಸಿದಿದೆ. ಬಡಾಸುನಲ್ಲಿರುವ ಆರು ಕೋಣೆಗಳ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಕೆಲವೇ ಸಮಯದಲ್ಲಿ ಕುಸಿದಿದೆ. ಕುಸಿದು ಬೀಳುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಸಂಭವಿಸುವ ಮುನ್ನ ರೆಸಾರ್ಟ್ ಮತ್ತು ರೆಸ್ಟೋರೆಂಟ್‌ನಿಂದ ಜನರನ್ನು ಹೊರಕಳುಹಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮದಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಳೆಯಿಂದಾಗಿ ರೆಸಾರ್ಟ್‌ನ ಗೋಡೆಗಳು ಹಾನಿಗೊಳಗಾಗಿದ್ದರಿಂದ ಕುಸಿತ ಉಂಟಾಗಿದೆ ಎನ್ನಲಾಗಿದೆ.
ಜುಲೈ 18 ರಂದು ಈ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆಳಭಾಗದಲ್ಲಿರುವ ಭದ್ರತಾ ಗೋಡೆಗಳು ಹಾನಿಗೊಳಗಾಗಿವೆ. ಕೆಳಗೆ ಹರಿಯುವ ಹೊಳೆಯಿಂದ ನಿರಂತರ ಸವೆತ ಉಂಟಾಗಿದೆ. ಇದರಿಂದಾಗಿ ರೆಸಾರ್ಟ್ ಮತ್ತು ರೆಸ್ಟೋರೆಂಟ್ ನಾಶವಾಗಿದೆ ಎಂದು ಮಾಲೀಕ ಅವತಾರ್ ಸಿಂಗ್ ತಿಳಿಸಿದ್ದಾರೆ.
ಅಲ್ಲದೇ ರೆಸಾರ್ಟ್‌ನ ಮುಂಭಾಗದಲ್ಲಿ ಹಾದುಹೋಗುವ ಕೇದಾರನಾಥ ಹೆದ್ದಾರಿಗೂ ಹಾನಿಯಾಗಿದೆ. ರಸ್ತೆಯ ಅಂಚು ಕುಸಿದಿದ್ದು, ವಾಹನ ಓಡಾಟಕ್ಕೆ ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆ ಆತಂಕವನ್ನು ಹೆಚ್ಚು ಮಾಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: Flood: ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಮುಂದುವರೆದ ಪ್ರವಾಹ: ವಾಹನ ಸಂಚಾರ ಸ್ಥಗಿತ