ಹುಕ್ಕೇರಿಯಲ್ಲಿ 66 ಅಡಿ ಬಾವಿಗೆ ಬಿದ್ದಿದ್ದ ಎತ್ತುಗಳ ರಕ್ಷಣೆ: ವಿಡಿಯೋ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/08-08-2023/640-480-19212672-thumbnail-16x9-ck.jpg)
ಚಿಕ್ಕೋಡಿ(ಬೆಳಗಾವಿ): 66 ಅಡಿ ಆಳದ ಬಾವಿಗೆ ಬಿದ್ದಿದ್ದ ಜೋಡೆತ್ತುಗಳನ್ನು ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಜಮೀನಿನಲ್ಲಿ ಆಕಸ್ಮಿಕವಾಗಿ ಎತ್ತುಗಳು ಬಾವಿಗೆ ಬಿದ್ದಿದ್ದವು. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ ಎತ್ತುಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ರೈತ ಭೀಮಪ್ಪ ಪೂಜೇರಿ ಎಂಬುವರಿಗೆ ಸೇರಿದ್ದ ಎತ್ತುಗಳು ಹೆದರಿ ಬಾವಿಗೆ ಬಿದ್ದಿದ್ದವು. ಈ ಬಗ್ಗೆ ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಗಾಮಿಸಿ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಎತ್ತುಗಳನ್ನು ಒಂದರ ನಂತರ ಒಂದನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಪ್ರತ್ಯೇಕ ಘಟನೆ- ಬೀದಿನಾಯಿ ರಕ್ಷಣೆ: ಇತ್ತೀಚಿಗೆ, ಯುವಕನೋರ್ವ ಬಾವಿಗೆ ಬಿದ್ದಿದ್ದ ಬೀದಿನಾಯಿಯನ್ನು ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿತ್ತು. ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ನಾಯಿಯನ್ನು ಕಂಡ ನಾಗೇಂದ್ರ ಎಂಬವರು ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ಮಾನವೀಯತೆ ಮೆರೆದಿದ್ದರು.
ಇದನ್ನೂ ಓದಿ: ವಿಡಿಯೋ: ಹಳೇ ಮೋಟಾರ್ ಸೈಕಲ್ನ ಬಿಡಿಭಾಗ ಬಳಸಿ ವಿಭಿನ್ನ ಸೈಕಲ್ ಉತ್ಪಾದಿಸಿದ ಯುವಕ