ಅಡುಗೆ ಮನೆಯಲ್ಲಿ ಅವಿತಿದ್ದ ನಾಗರಹಾವು ರಕ್ಷಣೆ : ವಿಡಿಯೋ
🎬 Watch Now: Feature Video
ಗದಗ : ಬೆಳ್ಳಂಬೆಳಗ್ಗೆ ಅಡುಗೆ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷಗೊಂಡು ಮನೆಯ ಸದಸ್ಯರನ್ನು ಭಯಭೀತಗೊಳಿಸಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹನುಮಂತ ಗುಂಡಳ್ಳಿ ಎಂಬವರ ಮನೆಯ ಅಡುಗೆ ಕೋಣೆಯಲ್ಲಿ ನಾಗರಹಾವು ಕಂಡುಬಂದಿದೆ.
ಮನೆಯ ಹಿಂದಿನ ಬಾಗಿಲ ಮೂಲಕ ಒಳಗೆ ಆಗಮಿಸಿದ್ದ ನಾಗರಹಾವು ಅಡುಗೆ ಮನೆಯಲ್ಲಿರಿಸಿದ್ದ ಡಬ್ಬದ ಹಿಂದೆ ಅವಿತುಕೊಂಡಿತ್ತು. ಈ ವೇಳೆ ಮಹಿಳೆಯೊಬ್ಬರು ಅಡುಗೆ ಮನೆಗೆ ಬಂದಾಗ ನಾಗರಹಾವು ಬುಸುಗುಟ್ಟುತ್ತಿರುವ ಸದ್ದು ಕೇಳಿಸಿದೆ. ಆತಂಕಗೊಂಡ ಮಹಿಳೆಯು ಮನೆಯವರಿಗೆ ತಿಳಿಸಿದ್ದಾರೆ.ಈ ವೇಳೆ ನಾಗರಹಾವು ಇರುವುದು ಕಂಡುಬಂದಿದೆ.
ಬಳಿಕ ಮನೆಯವರು ಉರಗ ರಕ್ಷಕ ಬಿ ಆರ್ ಸುರೇಬಾನ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುರೇಬಾನ ಅವರು ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ನಾಗರಹಾವು ಸುಮಾರು ನಾಲ್ಕು ಅಡಿಯಷ್ಟು ಉದ್ದವಿತ್ತು ಎಂದು ತಿಳಿದುಬಂದಿದೆ. ಹಾವುಗಳನ್ನ ಸೆರೆ ಹಿಡಿಯುವುದರಲ್ಲಿ ಸುರೇಬಾನ್ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ಅವರು ತೊಡಗಿದ್ದಾರೆ.
ಇದನ್ನೂ ಓದಿ : ನಿಯಂತ್ರಣ ತಪ್ಪಿದ ಕಾರಿಂದ ಬೈಕ್, ಬಸ್ ನಿಲ್ದಾಣಕ್ಕೆ ಡಿಕ್ಕಿ; ದ್ವಿಚಕ್ರವಾಹನ ಸವಾರ ಪವಾಡಸದೃಶ್ಯ ಪಾರು