ಕಾಲುವೆಯಲ್ಲಿ ಕುಳಿತು ಎಣ್ಣೆ ಪಾರ್ಟಿ, ನೀರು ಬಂದಾಗ ಫಜೀತಿ- ವಿಡಿಯೋ
🎬 Watch Now: Feature Video
ಭಿವಾನಿ (ಹರಿಯಾಣ): ಕಸ ತುಂಬಿದ ಕಾಲುವೆ ನೀರಿನಲ್ಲಿ ತೇಲಿ ಹೋಗುತ್ತಿದ್ದ ಕುಡುಕರನ್ನು ನೀರಾವರಿ ಇಲಾಖೆಯ ನೌಕರರು ಕಾಪಾಡಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ಬುಧವಾರ ನಡೆದಿದೆ. ಇದಕ್ಕೂ ಮುನ್ನ, ಜೂಯಿ ಕಾಲುವೆಯ ಮಧ್ಯದಲ್ಲಿ ಮೂವರು ನಿರಾಳವಾಗಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾಲುವೆಯಲ್ಲಿ ಏಕಾಏಕಿ ಅಪಾರ ಪ್ರಮಾಣದ ಕಸ ಸಮೇತ ಕೊಳಚೆ ನೀರು ಹರಿದು ಬಂದಿದೆ. ಮದ್ಯದ ನಶೆಯಲ್ಲಿದ್ದ ಜನರ ಕಾಲುಗಳು ಕಸದಲ್ಲಿ ಹೂತು ಹೋಗಿ ತಕ್ಷಣ ಮೇಲೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಾಲುವೆಯಲ್ಲಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರು.
ನೀರಾವರಿ ಇಲಾಖೆಯ ನೌಕರರು ಕಾಲುವೆ ತ್ಯಾಜ್ಯವನ್ನು ಹೊರತೆಗೆಯುತ್ತಾ ಕಾಲುವೆ ಹಿಂಭಾಗದಿಂದ ಬರುತ್ತಿದ್ದರು. ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ತ್ಯಾಜ್ಯ ತೆಗೆಯುವ ಪರಿಕರದ ಸಹಾಯದಿಂದ ರಕ್ಷಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋದಲ್ಲಿ ಮೂವರನ್ನು ಮೇಲಕ್ಕೆತ್ತುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಿಮಾಚಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಹಿಮ: ಜೆಸಿಬಿ ಬಳಸಿ ತೆರವು- ವಿಡಿಯೋ