ಯುವಕರೊಂದಿಗೆ ವಾಲಿಬಾಲ್ ಆಡಿದ ಶಾಸಕ ರೇಣುಕಾಚಾರ್ಯ.. ವಿಡಿಯೋ - ವಿಜಯದಶಮಿ ಹಬ್ಬ
🎬 Watch Now: Feature Video
ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಈ ಹಿಂದೆ ಮಕ್ಕಳೊಂದಿಗೆ ವಾಲಿಬಾಲ್ ಆಟವಾಡಿ ಸುದ್ದಿಯಾಗಿದ್ದರು. ಇದೀಗ ಕ್ಷೇತ್ರ ಪ್ರವಾಸದ ವೇಳೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಯುವಕರೊಂದಿಗೆ ವಾಲಿಬಾಲ್ ಆಟವಾಡಿದರು. ಹೊನ್ನಾಳಿ ತಾಲೂಕಿನ ಕಂಕನಹಳ್ಳಿ ತಾಂಡಾದಲ್ಲಿ ಪ್ರವಾಸ ಮಾಡುತ್ತಿದ್ದ ವೇಳೆ ಅದೇ ಗ್ರಾಮದ ಯುವಕರ ಒತ್ತಾಯದ ಮೇರೆಗೆ ಶಾಸಕ ವಾಲಿಬಾಲ್ ಆಡುವ ಮೂಲಕ ಸಂತಸ ಪಟ್ಟರು. ಬಳಿಕ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇನ್ನು ಗ್ರಾಮದ ಯುವಕರು ಶಾಸಕರೊಂದಿಗೆ ಫೋಟೊಗೆ ಫೋಸ್ ನೀಡಿದರು.
Last Updated : Feb 3, 2023, 8:29 PM IST