ಬರ್ಮುಡಾ ಧರಿಸಿ ರೇಣುಕಾಚಾರ್ಯ ಜಯಂತಿ ಆಚರಣೆ: ಸ್ವಾಮೀಜಿ ಕಾಲಿಗೆ ಬಿದ್ದ ಕಲಘಟಗಿ ತಹಶೀಲ್ದಾರ್ - ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ
🎬 Watch Now: Feature Video
ಹುಬ್ಬಳ್ಳಿ: ಕಾಟಾಚಾರಕ್ಕೆ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಿದ್ದಾರೆ ಎಂದು ಆರೋಪಿಸಿ ವೀರಶೈವ ಜಂಗಮ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಪ್ಪಿನ ಅರಿವಾಗಿ ತಹಶೀಲ್ದಾರ್ ಬಹಿರಂಗವಾಗಿ ಪ್ರತಿಭಟನಾ ನಿರತ ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ಘಟನೆ ಕಲಘಟಗಿ ತಹಶೀಲ್ ಕಚೇರಿಯಲ್ಲಿ ನಡೆದಿದೆ.
ಕಲಘಟಗಿ ತಾಲೂಕು ಆಡಳಿತದಿಂದ ಯಾವುದೇ ಪೂರ್ವಭಾವಿ ಸಭೆ ಕರೆಯದೇ ಹಾಗೂ ಕಚೇರಿ ಸಿಬ್ಬಂದಿ ಬರ್ಮುಡಾ ಧರಿಸಿ ಕಚೇರಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಿಂದ ಆಕ್ರೋಶಗೊಂಡ ವೀರಶೈವ ಸಮಾಜದ ಮುಖಂಡರು, ಜಗದ್ಗುರುಗಳಿಗೆ ಅಪಮಾನ ಮಾಡಲಾಗಿದೆ ಎಂದು ಹನ್ನೆರಡು ಎತ್ತಿನ ಮಠದ ಪೀಠಾಧಿಪತಿ ರೇಣುಕಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದರು.
ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನನವರನ್ನು ಪ್ರತಿಭಟನಾನಿರತರು ತರಾಟೆಗೆ ತಗೆದುಕೊಂಡಿದ್ದರು. ಸಮಾಜದ ಆಕ್ರೋಶದಿಂದ ತಪ್ಪಿನ ಅರಿವಾಗಿ ತಹಶೀಲ್ದಾರ್ ಶ್ರೀಗಳ ಕಾಲಿಗೆ ಬಿದ್ದು, ಕ್ಷಮೆಯಾಚನೆ ಮಾಡಿದ್ದಾರೆ. ಮತ್ತೊಮ್ಮೆ ರೇಣುಕಾಚಾರ್ಯ ಜಯಂತಿಯನ್ನು ಅದ್ಧೂರಿಯಾಗಿ ಮಾಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.
ಇದನ್ನೂ ನೋಡಿ: ವಿಜಯ ಸಂಕಲ್ಪ ಯಾತ್ರೆಗೆ ಪ್ರತಿಭಟನೆ ಬಿಸಿ: ಗುತ್ತೇದಾರ್ ಸಹೋದರರಿಂದ ಟಿಕೆಟ್ ಪೈಪೋಟಿ