Puri Jagannath Rathyatra: ಪುರಿ ಜಗನ್ನಾಥ ದೇವರ ವಾರ್ಷಿಕ ರಥಯಾತ್ರೆ ಶುರು - ಒಡಿಶಾ

🎬 Watch Now: Feature Video

thumbnail

By

Published : Jun 20, 2023, 8:27 AM IST

Updated : Jun 20, 2023, 9:03 AM IST

ಪುರಿ(ಒಡಿಶಾ): ಭಗವಾನ್ ಜಗನ್ನಾಥ ಮತ್ತು ದೇವಿ ಶುಭದ್ರ ಮತ್ತು ಬಲಭದ್ರ ದೇವರ ವಾರ್ಷಿಕ ರಥಯಾತ್ರೆಯು ಇಂದು ನಡೆಯಲಿದೆ. ರಥಯಾತ್ರೆ ಶ್ರೀಮಂದಿರದಿಂದ ಗುಂಡಿಚಾ ದೇವಸ್ಥಾನದವರೆಗೆ ಸಾಗಿ ಬರಲಿದೆ. ಉತ್ಸವ ಸುಗಮವಾಗಿ ನಡೆಯಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾತ್ರೆಗೆ ಮೂರು ಭವ್ಯವಾದ ರಥಗಳು ಸಿದ್ಧವಾಗಿವೆ ಮತ್ತು ಸಿಂಘ ದ್ವಾರಕ್ಕೆ ತಂದು ಗುಂಡಿಚಾ ದೇವಸ್ಥಾನದ ಕಡೆಗೆ ಪೂರ್ವಕ್ಕೆ ಮುಖಮಾಡಲಾಗಿದೆ. 

ಲಕ್ಷಾಂತರ ಭಕ್ತರು ಸೇರಿ ದೇವರ ರಥಗಳನ್ನು ಎಳೆಯುತ್ತಾರೆ. ರಥದಲ್ಲಿ ಕುಳ್ಳಿರಿಸಿರುವ ಜಗನ್ನಾಥನ ದರ್ಶನಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವರ ದರ್ಶನ ಪಡೆಯುತ್ತಿದ್ದಾರೆ. ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್‌ಧಾಮ ಕ್ಷೇತ್ರಗಳಲ್ಲೊಂದು. ವಿಶಿಷ್ಟವಾದ ಹಿನ್ನೆಲೆ ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ರಥೋತ್ಸವದಿಂದ ಹೆಸರುವಾಸಿ. ಚಾರ್‌ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದಾಗಿರುವ ಈ ದೇವಾಲಯವನ್ನು ಮರದಿಂದಲೇ ನಿರ್ಮಿಸಲಾಗಿದೆ. ಅಬಂಟಿಯ ಸೋಮವಂಶದ ರಾಜ ಇಂದ್ರದ್ಯುಮ್ನನು ಪುರಿಯಲ್ಲಿ ಜಗನ್ನಾಥನ ಮುಖ್ಯ ದೇವಾಲಯವನ್ನು ನಿರ್ಮಿಸಿದನು. ಪ್ರಸ್ತುತ ದೇವಾಲಯವನ್ನು ಹತ್ತನೇ 10 ನೇ ಶತಮಾನದಿಂದ ಪುನರ್​ ನಿರ್ಮಿಸಲಾಯಿತು. ಇದೇ ವೇಳೆ ರಥೋತ್ಸವಕ್ಕೆ ಪಿಎಂ ಮೋದಿ ಶುಭ ಕೋರಿದ್ದಾರೆ.

ಇದನ್ನೂ ಓದಿ: Kedarnath: ಕೇದಾರನಾಥ ಲಿಂಗದ ಮೇಲೆ ಮಹಿಳೆ ಹಣ ತೂರಿದ ವಿಡಿಯೋ ವೈರಲ್‌

Last Updated : Jun 20, 2023, 9:03 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.