ಕಾರಿನ ಟಯರ್ ಬ್ಲಾಸ್ಟ್ ನಡುವೆಯೂ ಬೇಕಾಬಿಟ್ಟಿ ಚಾಲನೆ : ವಿಡಿಯೋ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Mar 25, 2023, 11:24 AM IST

Updated : Mar 25, 2023, 12:09 PM IST

ಬೆಂಗಳೂರು: ಟಯರ್ ಬ್ಲಾಸ್ಟ್ ಆದರೂ ಸಹ ಚಾಲಕನೊಬ್ಬ ಕಿ.ಮೀಟರ್​ಗಟ್ಟಲೇ ರಿಮ್​ನಲ್ಲೇ ಅತಿವೇಗವಾಗಿ ಕಾರು ಚಲಾಯಿಸಿದ ಘಟನೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾನಗರದಿಂದ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಯುವಕನೊಬ್ಬ ಮನಸೋಇಚ್ಛೆ ತನ್ನ ಟೊಯೋಟಾ ಗ್ಲಾಂಜಾ ಕಾರು ಚಲಾಯಿಸಿದ್ದು, ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಆಗಿದೆ. ಆದರೂ ಸಹ ರಿಮ್​ನಲ್ಲೆ ಕಾರು ಚಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. 

ಸುಮಾರು 100-120 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಕಾರನ್ನ ಕಂಡು ಜನ ಭಯಭೀತರಾಗಿದ್ದಾರೆ. ಕಾರಿನ ವೇಗ ನೋಡಿದ ರಾತ್ರಿ ಪಾಳಿ ಪೊಲೀಸರು ಸುಮಾರು 2-3 ಕಿ.ಮೀ ದೂರದವರೆಗೆ ಆ ಯುವಕನನ್ನು ಹಿಂಬಾಲಿಸಿದ್ದಾರೆ. ಆದ್ರೆ ಆಕ್ಸೆಲ್ ಕಟ್ ಆಗಿದ್ದಕ್ಕೆ ಮುನಿಯಪ್ಪ ಸರ್ಕಲ್ ಬಳಿ ಕಾರು ಕೆಟ್ಟು ನಿಂತಿತ್ತು. ಬಳಿಕ ಪೊಲೀಸರು ಕಾರಿನ ಬಳಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು. ಪೊಲೀಸರು ಈ ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.  

ಇದನ್ನೂ ಓದಿ: ಮರಕ್ಕೆ ಬೈಕ್​ ಡಿಕ್ಕಿಯಾಗಿ ಓರ್ವ ಸಾವು, ಮತ್ತೋರ್ವ ಗಂಭೀರ: ಸಿಸಿಟಿವಿ ದೃಶ್ಯ

Last Updated : Mar 25, 2023, 12:09 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.