thumbnail

By

Published : Apr 22, 2023, 4:06 PM IST

ETV Bharat / Videos

ಶ್ರೀರಾಘವೇಂದ್ರ ಮಠದಲ್ಲಿ ರಂಜಾನ್​ ಆಚರಣೆ.. ಸೌಹಾರ್ದತೆ ಸಂದೇಶ ಸಾರಿದ ಶ್ರೀಗಳು

ರಾಯಚೂರು: ಮಂತ್ರಾಲಯದ ಕಲಿಯುಗದ ಕಾಮಧೇನು ಭಕ್ತರ ಕಲ್ಪವೃಕ್ಷ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಯಿತು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದರು. 

ಮುಸ್ಲಿಂ ಬಾಂಧವರನ್ನು ಭೇಟಿಯಾದ ಶ್ರೀಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ಕುಶಲೋಪರಿ ವಿಚಾರಿಸಿ, ರಂಜಾನ್ ಹಬ್ಬದ ಶುಭಾಶಯ ಕೋರಿದರು. ಇದೇ ವೇಳೆ, ಅನುಗ್ರಹ ಸಂದೇಶ ನೀಡಿದರು. ನಂತರ ಮಂತ್ರಾಕ್ಷತೆ ಹಾಗೂ ಪರಿಮಳ ಪ್ರಸಾದವನ್ನು ವಿತರಿಸಿದರು. ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮುಸ್ಲಿಂ ಸಮುದಾಯವರು ರಂಜಾನ್ ಹಬ್ಬದಂದು ಭೇಟಿ ನೀಡಿ ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆ ಸಂದೇಶ ರವಾನಿಸಿದರು.

ಅಲ್ಲದೇ ರಾಯರ ಮಠದಲ್ಲಿ ನಡೆಯುವ ಆರಾಧನಾ ಮಹೋತ್ಸವ ಹಾಗೂ ಜಾತ್ರ ಮಹೋತ್ಸಹದಲ್ಲಿ ಮುಸ್ಲಿಂ ಸಮುದಾಯದವರು ಆಗಮಿಸಿ ದರ್ಶನ ಪಡೆದುಕೊಂಡು, ತೆಂಗಿನಕಾಯಿ ಒಡೆಯುವುದು, ಹರಕೆ ತೀರಿಸುವುದು ಕಂಡು ಬರುತ್ತಿತ್ತು. ಸಂವಿಧಾನದಲ್ಲಿ ವಿಶ್ವಾಸ ಇಡಿ, ನಿಮ್ಮ ಧರ್ಮ ಪಾಲನೆ ಮಾಡುವುದರ ಜೊತೆಯಲ್ಲಿ ಎಲ್ಲರೊಟ್ಟಿಗೆ ಒಂದಾಗಿ ಜೀವನ ಸಾಗಿಸಬೇಕು. ಜೊತೆಗೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ಆಶೀರ್ವದಿಸಿದರು.

ಇದನ್ನೂ ಓದಿ: ಹೆಲಿಕಾಪ್ಟರ್​ ತಪಾಸಣೆ ನಡೆಸಿದ್ದರಲ್ಲಿ ತಪ್ಪೇನಿಲ್ಲ ಎಂದ ಡಿಕೆಶಿ: ಹೆಲಿಕಾಪ್ಟರ್ ಪರಿಶೀಲಿಸಿದ ಚುನಾವಣಾಧಿಕಾರಿಗಳು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.