ಮೆಕ್ಕೆಜೋಳದಲ್ಲಿ ಮೂಡಿಬಂದ ರಾಮಮಂದಿರ-ವಿಡಿಯೋ

🎬 Watch Now: Feature Video

thumbnail

ಕೊಪ್ಪಳ: ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮಮಂದಿರದಲ್ಲಿ ರಾಮದೇವರ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಭವ್ಯ ದೇಗುಲದ ಪೂರ್ಣ ಸ್ವರೂಪ ಇನ್ನೂ ಬಹಿರಂಗವಾಗಿಲ್ಲ. ಆದರೆ ನೀಲನಕ್ಷೆಯಂತೆ ಕೊಪ್ಪಳದ ರೈತರೊಬ್ಬರು ತಮ್ಮ ಹೊಲದಲ್ಲಿ ರಾಮಮಂದಿರವನ್ನು ಹೋಲುವ ದೇಗುಲ ನಿರ್ಮಿಸಿದ್ದಾರೆ. ಮೆಕ್ಕೆಜೋಳದಿಂದಲೇ ಈ ಮಂದಿರ ನಿರ್ಮಾಣವಾಗಿದೆ ಎನ್ನುವುದು ಇಲ್ಲಿ ವಿಶೇಷ.

ಓಜನಳ್ಳಿಯ ಬಸವರಾಜ ಜಂತ್ಲಿ ಎಂಬವರು ಮಂದಿರ ನಿರ್ಮಿಸಿದ್ದಾರೆ. ಇದಕ್ಕಾಗಿ ಸುಮಾರು 58,000ಕ್ಕೂ ಹೆಚ್ಚು ಮೆಕ್ಕೆಜೋಳ ಬಳಸಿದ್ದಾರೆ. ಇದೀಗ ಮಂದರಿವನ್ನು ಸುತ್ತಮುತ್ತಲಿನ ಜನರಿಗೆ ಪ್ರದರ್ಶನಕ್ಕಾಗಿ ಇಟ್ಟಿದ್ದಾರೆ. ಇಂದಿನಿಂದ ಜನವರಿ 22ರವರೆಗೂ ಮೆಕ್ಕೆಜೋಳದಲ್ಲಿ ನಿರ್ಮಾಣವಾದ ರಾಮಮಂದಿರ ಪ್ರದರ್ಶನಗೊಳ್ಳಲಿದೆ. 

ರೈತರು ಅಯೋಧ್ಯೆಗೆ ಸದ್ಯದ ಮಟ್ಟಿಗೆ ಹೋಗಲು ಸಾಧ್ಯವಾಗದೇ ಇರಬಹುದು. ಆದರೆ ಅಯೋಧ್ಯೆಯ ಮಂದಿರವನ್ನು ಇಲ್ಲಿಂದಲೇ ನೋಡಿ ಆನಂದಿಸಬಹುದು. ಸುಮಾರು ಒಂದು ವಾರ ಸಮಯ ತೆಗೆದುಕೊಂಡು ಈ ಮಂದಿರವನ್ನು ಕಲಾವಿದರು ನಿರ್ಮಿಸಿದ್ದಾರೆ. 

ಈ ಕುರಿತು ಗ್ರಾಮಸ್ಥ ರಮೇಶ ಓಜನಹಳ್ಳಿ ಮಾತನಾಡಿ, "ನಾವು ಈ ಭಾಗದಲ್ಲಿ ರಾಮಮಂದಿರ ಕಟ್ಟಿ ರೈತರಿಗೆ ದರ್ಶನ ಮಾಡಿಸಬೇಕೆಂದು ಬಯಸಿದ್ದೆವು. ಅದಕ್ಕಾಗಿ ಮೆಕ್ಕೆಜೋಳದ ಮುಖಾಂತರ ಮಂದಿರ ರಚಿಸಿದ್ದೇವೆ. ಕೊಪ್ಪಳ ಜಿಲ್ಲೆ ಹನುಮನ ಜನ್ಮಸ್ಥಳ. ಹನುಮ ರಾಮನ ಭಕ್ತನಾಗಿರುವುದರಿಂದ ನಾವು ಈ ಮಂದಿರ ಕಟ್ಟಿದ್ದೇವೆ" ಎಂದರು. 

ಇದನ್ನೂ ಓದಿ: ಶತಾಯುಷಿ ಶಿವಮ್ಮ ಸರಗಣಾಚಾರಿಗೆ ಜನ್ಮದಿನದ ಸಂಭ್ರಮ - ವಿಡಿಯೋ 

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.