ರಾಜಘಟ್ಟ ಆಂಜನೇಯ ಸ್ವಾಮಿ ಜಾತ್ರೆ: ಬೃಹತ್ ಕೊಪ್ಪರಿಗೆಯಲ್ಲಿ 2 ಸಾವಿರ ಮುದ್ದೆ ತಯಾರಿ! - ಕೊಪ್ಪರಿಗೆ ಮುದ್ದೆ ಊಟ
🎬 Watch Now: Feature Video
ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಆಂಜನೇಯ ಸ್ವಾಮಿ ರಥೋತ್ಸವ ನಿನ್ನೆ(ಶನಿವಾರ) ವಿಜೃಂಭಣೆಯಿಂದ ನೆರವೇರಿತು. ಮೂರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಕೊಪ್ಪರಿಗೆ ಮುದ್ದೆ ಊಟ ಪ್ರಮುಖ ಆಕರ್ಷಣೆ. 20 ವರ್ಷಗಳ ಹಿಂದೆ ದಾನಿಯೊಬ್ಬರು ಬೃಹತ್ ಗಾತ್ರದ ಕೊಪ್ಪರಿಗೆಯನ್ನು ದೇವಾಲಯಕ್ಕೆ ದಾನ ನೀಡಿದ್ದರಂತೆ. ಅದೇ ಕೊಪ್ಪರಿಗೆಯಲ್ಲಿ ಜಾತ್ರೆ ಸಮಯದಲ್ಲಿ ಮುದ್ದೆ ತಯಾರಿಸಲಾಗುತ್ತದೆ. ಬೃಹತ್ ಗಾತ್ರದ ಕೊಪ್ಪರಿಗೆಯಲ್ಲಿ ಒಮ್ಮೆಲೆ 2 ಸಾವಿರ ಮುದ್ದೆಗಳನ್ನು ತಯಾರಿಸಲಾಗುತ್ತದೆ. ಕೊಪ್ಪರಿಗೆಯಲ್ಲಿ ಮಾಡುವ ರಾಗಿ ಮುದ್ದೆಯ ಜತೆಗೆ ಕಾಳಿನ ಹುಳಿಯನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಗುತ್ತದೆ. ಬಿಸಿ ಬಿಸಿ ರಾಗಿ ಮುದ್ದೆಯೊಂದಿಗೆ ಕಾಳಿನ ಹುಳಿ ಭಕ್ತರ ನಾಲಿಗೆ ರುಚಿ ತಣಿಸುತ್ತದೆ.
ರಾಜಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಇದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತಿ ದೊಡ್ಡದಾದ ಆಂಜನೇಯ ದೇವಸ್ಥಾನ. ಶನಿವಾರ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಬೆಳಗ್ಗೆ ಹೋಮ ಹಾಗೂ ಮಧ್ಯಾಹ್ನ 12ಕ್ಕೆ ಮಹಾರಥೋತ್ಸವ ಜರುಗಿತು. ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಕರಿಮೆಣಸು ಎರಚಿ ಭಕ್ತಿ ಮೆರೆದರು.
ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಕಣವಿ ವೀರಭದ್ರೇಶ್ವರ ಅಗ್ಗಿ ಉತ್ಸವ- ವಿಡಿಯೋ