ಉತ್ತರಕನ್ನಡದಲ್ಲಿ ಗಾಳಿ ಸಹಿತ ಮಳೆ ಆರ್ಭಟ: ಮತಗಟ್ಟೆಗಳಲ್ಲಿ ಅಧಿಕಾರಿಗಳ ಪರದಾಟ - ಕಾರವಾರದಲ್ಲೂ ಮಳೆ ಆರ್ಭಟ

🎬 Watch Now: Feature Video

thumbnail

By

Published : May 10, 2023, 9:14 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ವಿಧಾನಸಭೆ ಚುನಾವಣೆಯ ಮತದಾನದ ಬೆನ್ನಲ್ಲೇ ಗುಡುಗು ಸಿಡಿಲು ಸಹಿತ ಮಳೆ ಆರ್ಭಟ ಜೋರಾಗಿದ್ದು, ಮತದಾನದ ಬಳಿಕ ವಿದ್ಯುತ್ ಕೂಡ ಕೈಕೊಟ್ಟ ಕಾರಣ ಮತದಾನ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಪುನಃ ಜೋಡಣೆಗೆ ಸಿಬ್ಬಂದಿ ಪರದಾಡುವಂತಾಯಿತು.

ಮಧ್ಯಾಹ್ನದ ಬಳಿಕ ಜಿಲ್ಲೆಯ ಹಳಿಯಾಳ, ಭಟ್ಕಳ, ಯಲ್ಲಾಪುರ ಭಾಗದಲ್ಲಿ ಕಾಣಿಸಿಕೊಂಡಿದ್ದ ಮಳೆ, ಸಂಜೆ ವೇಳೆಗೆ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಆರ್ಭಟಿಸಿದೆ. ಮತದಾರರು ತಮ್ಮ ಹಕ್ಕು ಚಲಾಯಿಸಲು ಪರದಾಡುವಂತಾಯಿತು. ಅಲ್ಲದೇ ಮತದಾನ ಮುಕ್ತಾಯದ ಬಳಿಕ ಮಳೆ ಗಾಳಿ ಆರ್ಭಟ‌ ಜೋರಾಗಿದ್ದರಿಂದ ಮತಗಟ್ಟೆಗಳಿಗೆ ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿತು. ಮತಗಟ್ಟೆ ಅಧಿಕಾರಿಗಳು ಕತ್ತಲಲ್ಲೇ ಮತಯಂತ್ರಗಳನ್ನು ಜೋಡಿಸಿ ಸೀಲ್ ಮಾಡಲು ಪರದಾಡಿದರು. ಇನ್ನೂ ಕೆಲವೆಡೆ ಮೊಬೈಲ್ ಟಾರ್ಚ್ ಹಿಡಿದು ಮತದಾನ ಮುಕ್ತಾಯದ ದಾಖಲೆ ಸಿದ್ಧಪಡಿಸಿದ ದೃಶ್ಯ ಕಂಡುಬಂತು.

ಕಾರವಾರದಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ಮತಯಂತ್ರಗಳನ್ನು ಕುಮಟಾದ ಡಾ. ಎ. ವಿ ಬಾಳಿಗಾ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲು ತೊಂದರೆಯಾಯಿತು. 

ಇದನ್ನೂಓದಿ:ಅನಾರೋಗ್ಯದ ನಡುವೆಯೂ ವ್ಹೀಲ್​ ಚೇರ್​ನಲ್ಲಿ ಬಂದು ಮತಹಾಕಿದ ಪದ್ಮಶ್ರೀ ಸುಕ್ರಜ್ಜಿ.. ಯುವ ಜನತೆಗೆ ಮಾದರಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.