ಹೊಗೆನಕಲ್​ನಲ್ಲಿ ರೋಮಾಂಚಕ ತೆಪ್ಪಗಳ ರೇಸ್; ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನ - ಹೊಗೆನಕಲ್ ಜಲಪಾತ

🎬 Watch Now: Feature Video

thumbnail

By

Published : Jun 9, 2023, 3:47 PM IST

ಚಾಮರಾಜನಗರ: 'ಭಾರತದ ನಯಾಗರ' ಎಂದೇ ಪ್ರಸಿದ್ಧಿ ಪಡೆದಿರುವ ಕರ್ನಾಟಕ ಹಾಗೂ ತಮಿಳು‌ನಾಡು ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ಆಕರ್ಷಕ ತೆಪ್ಪಗಳ ರೇಸ್ ನಡೆಯಿತು. ಸಂಪ್ರದಾಯದಂತೆ ಊಟುಮಲೈ ಎಂಬ ಗ್ರಾಮಸ್ಥರು ಮಾರಿಯಮ್ಮನ ಹಬ್ಬದ ಪ್ರಯುಕ್ತ ಈ ತೆಪ್ಪಗಳ ರೇಸ್ ಆಯೋಜನೆ ಮಾಡಿದ್ದರು. ರೇಸ್​ನಲ್ಲಿ 8 ರಿಂದ 10 ತೆಪ್ಪಗಳು ಭಾಗಿಯಾಗಿದ್ದವು. ಭೋರ್ಗರೆದು ಉಕ್ಕಿ ಹರಿಯುವ ಕಾವೇರಿಯಲ್ಲಿ ರೋಮಾಂಚಕ ರೇಸ್ ವೀಕ್ಷಕರ ಮನರಂಜಿಸಿತು.

ಒಂದು ತೆಪ್ಪದಲ್ಲಿ ಇಬ್ಬರು ಕುಳಿತು 100 ಮೀ ರೇಸ್ ಸಾಗಬೇಕು. ಹೀಗೆ ನೀರಿನಲ್ಲಿ ಹುಟ್ಟು ಹಾಕಿ ಮೊದಲು ತೆಪ್ಪವನ್ನು ದಡ ಮುಟ್ಟಿಸಿದವರಿಗೆ ಅಂದರೆ ಗೆದ್ದವರಿಗೆ ಚಿನ್ನಾಭರಣವನ್ನು ಬಹುಮಾನವಾಗಿ ನೀಡಲಾಗಿದೆ. ಮೊದಲ ಬಹುಮಾನ 4 ಗ್ರಾಂ ಚಿನ್ನವನ್ನು ಪೆರುಮಾಳ್- ಮಯಿಲ್, ಎರಡನೇ ಬಹುಮಾನ 2 ಗ್ರಾಂ ಚಿನ್ನವನ್ನು ಶ್ರೀನಿ- ಪೆರುಮಾಳ್ ಹಾಗೂ 3 ನೇ ಬಹುಮಾನ 8 ಸಾವಿರ ಹಣವನ್ನು ಸತೀಶ್- ಕರುಪ್ಪನ್ ಎಂಬವರು ಗೆದ್ದರು. 

ಇದನ್ನೂ ನೋಡಿ: Uttarakhand avalanche: ಕೇದಾರನಾಥ ದೇವಾಲಯದ ಸುತ್ತ ಹಿಮಕುಸಿತ.. ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.