ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹22 ಲಕ್ಷ ಹಗಲು ದರೋಡೆ!- ವಿಡಿಯೋ
🎬 Watch Now: Feature Video
ಅಮೃತಸರ: ಪಂಜಾಬ್ನಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ದುಷ್ಕೃತ್ಯ ಬೆಳಕಿಗೆ ಬಂದಿದೆ. ರಾಣಿ ಕಾ ಬಾಗ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯನ್ನು ಗುರಿಯಾಗಿಸಿಕೊಂಡ ಕಳ್ಳರು ಸುಮಾರು 20 ರಿಂದ 22 ಲಕ್ಷ ರೂ ದೋಚಿದ್ದಾರೆ.
ಬ್ಯಾಂಕ್‌ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ವ್ಯವಸ್ಥೆ ಇಲ್ಲದ ಕಾರಣ ದರೋಡೆಕೋರರು ಯಾವುದೇ ಭಯವಿಲ್ಲದೆ ದಾಳಿ ನಡೆಸಿದ್ದಾರೆ. ಶಾಖೆಯ ಒಳನುಗ್ಗಿದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಬ್ಯಾಂಕ್ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.
ಪೊಲೀಸ್ ಅಧಿಕಾರಿ ಪಿಎಸ್ ವಿರ್ಕ್ ಮಾತನಾಡಿ, "ರಾಣಿ ಕಾ ಬಾಗ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಇಬ್ಬರು ಯುವಕರು ದರೋಡೆ ಮಾಡಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಬ್ಯಾಂಕ್‌ನಲ್ಲಿ ಸುಮಾರು 22 ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು" ಎಂದರು. ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, "ಯಾವುದೋ ಕೆಲಸದ ನಿಮಿತ್ತ ಬಂದವನು ಬ್ಯಾಂಕ್ ಹೊರಗಡೆ ನಿಂತಿದ್ದೆ. ಇಬ್ಬರು ಯುವಕರು ಗನ್ ತೋರಿಸಿ ದರೋಡೆ ನಡೆಸಿದರು" ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಮತ್ತೆ ಪಂಜಾಬ್ನಲ್ಲಿ ಹಗಲು ದರೋಡೆ.. ಆರು ಲಕ್ಷ ಲೂಟಿ ಮಾಡಿ ಎಸ್ಕೇಪ್ ಆದ ಖದೀಮರು!