ಲೋಕಸೇವಾ ಆಯೋಗದ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಸರ್ಕಾರದ ವಿರುದ್ಧ ಹೋರಾಟದಲ್ಲಿ 4 ಜನ ಅಧಿಕಾರಿಯೊಂದಿಗೆ 10 ಜನರಿಗೆ ಗಾಯ - ಐಜಿಪಿ ಚುಕು ಅಪಾ
🎬 Watch Now: Feature Video
ಇಟಾನಗರ (ಅರುಣಾಚಲ ಪ್ರದೇಶ): ನಿನ್ನೆ ಇಟಾನಗರದಲ್ಲಿ ಅರುಣಾಚಲ ಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯಿತಲ್ಲದೇ, ಈ ಸಂಘರ್ಷಣೆಯಲ್ಲಿ ನಾಲ್ವರು ಭದ್ರತಾ ಅಧಿಕಾರಿಗಳು ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ. ಪರಿಣಾಮ ನಡೆಯಬೇಕಿದ್ದ ರಾಜ್ಯ ಲೋಕಸೇವಾ ಆಯೋಗದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅರುಣಾಚಲ ಪ್ರದೇಶ ಸರ್ಕಾರ ಸದ್ಯಕ್ಕೆ ರದ್ದುಗೊಳಿಸಿದೆ.
ಇನ್ನೂ ಈ ಕುರಿತು ಹೇಳಿಕೆ ನೀಡಿದ ಐಜಿಪಿ ಚುಕು ಅಪಾ, ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಬೇಕಾಯಿತು. ಹಾಗೆ ಇಟಾನಗರ ಯಾವುದೇ ಅಹಿತಕರ ಪರಿಸ್ಥಿತಿ ಉಂಟಾಗದ ಹಾಗೆ ಮತ್ತು ಮುಂಜಾಗೃತ ಕ್ರಮವಾಗಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಹೊಸದಾಗಿ ನೇಮಕಗೊಂಡ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮುಂದೂಡಬೇಕೆಂದು ಒತ್ತಾಯಿಸಿದ್ದು, ಅದರಂತೆ ರಾಜ್ಯ ಸರ್ಕಾರ ಸದ್ಯಕ್ಕೆ ರದ್ದುಗೊಳಿಸಿದೆ ಎಂದಿದ್ದಾರೆ.
ವರದಿಗಳ ಪ್ರಕಾರ ಇಲ್ಲಿನ ಆಡಳಿತವೂ ಪರಿಸ್ಥಿತಿಯನ್ನು ನಿಭಾಯಿಸಲು ಸೆಕ್ಷನ್ 144 ನ್ನೂ ಹೇರಿದ್ದರೂ ಕೂಡ ಅರುಣಾಚಲ-ಜಂಟಿ-ಚಾಲನಾ ಸಮಿತಿ, ಪ್ಯಾನ್ ಅರುಣಾಚಲ ಜಂಟಿ ಸ್ಟೀರಿಂಗ್ ಸಮಿತಿ (ಪಿಎಜೆಎಸ್‌ಸಿ) ಮತ್ತು ನೂರಾರು ಯುವಕರು ಅರುಣಾಚಲ ಪ್ರದೇಶ ಲೋಕಸೇವಾ ಆಯೋಗದ (ಎಪಿಪಿಎಸ್‌ಸಿ) ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಗಂಟೆಗಳ ಬಂದ್‌ಗೆ ಕರೆ ನೀಡಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಈ ಘರ್ಷಣೆಯಲ್ಲಿ ಕೆಲ ಕಿಡಿಗೇಡಿಗಳು ಮೋಟಾರ್‌ಸೈಕಲ್ ಮತ್ತು ಒಂದು ವಾಹನವನ್ನು ಸುಟ್ಟುಹಾಕಿದ್ದು ಪರಿಸ್ಥಿಯನ್ನು ತೀವ್ರ ಹದಗೆಡುವಂತೆ ಮಾಡಿತು. ಸದ್ಯ ಕೇಂದ್ರೀಯ ತನಿಖಾ ದಳವು ಡಿಸೆಂಬರ್ 9, 2022 ರಂದು, ಅರುಣಾಚಲ ಪ್ರದೇಶ ಲೋಕಸೇವಾ ಆಯೋಗವು ಸಹಾಯಕ ಇಂಜಿನಿಯರ್ ಹುದ್ದೆಗಾಗಿ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎಂಟು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ.
ಇದನ್ನೂ ಓದಿ: ರೀಲ್ಸ್ಗಾಗಿ ಹೆದ್ದಾರಿಯಲ್ಲಿ ಪ್ರೇಮಿಗಳ ಬೈಕ್ ಸ್ಟಂಟ್ಸ್.. ಜೋಡಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರು