ರಾಯಚೂರು: ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಪ್ರತಿಭಟನೆ
🎬 Watch Now: Feature Video
ರಾಯಚೂರು: ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ. ಸಿಂಧನೂರು ತಾಲೂಕಿನ ಬೂದಿವಾಳ ಗ್ರಾಮ ಹಾಗೂ ಬೂದಿವಾಳ ಕ್ಯಾಂಪ್ನಲ್ಲಿ, ಸಿಂಧನೂರು ಮತ್ತು ಸಿರುಗುಪ್ಪ ಸೇರಿದಂತೆ ವಿವಿಧ ಘಟಕಗಳ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ. ಇದರ ಪರಿಣಾಮ ಸಿಂಧನೂರು ಹಾಗೂ ಸಿರುಗುಪ್ಪಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ತಡೆದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸುಮಾರು 2 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಈ ವಿಚಾರ ತಿಳಿದ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಸಾರಿಗೆ ಘಟಕದ ವ್ಯವಸ್ಥಾಪಕರು ಪ್ರತಿಭಟನಾ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಡಿಪೋ ಕಂಟ್ರೋಲರ್, ರಾಯಚೂರು ಹಾಗೂ ಬಳ್ಳಾರಿಯ ಎಲ್ಲಾ ಘಟಕಗಳ ಬಸ್‌ಗಳನ್ನು ಬೂದಿವಾಳದಲ್ಲಿ ನಿಲ್ಲಿಸಲು ಇಲಾಖೆಯ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಇನ್ಮುಂದೆ ಎಲ್ಲಾ ಬಸ್‌ಗಳು ಬೂದಿವಾಳದಲ್ಲಿ ನಿಲುಗಡೆ ಮಾಡಲಿವೆ ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಇದನ್ನೂ ಓದಿ: ರಾಯಚೂರಲ್ಲಿ ಏಮ್ಸ್ ನ್ಯಾಯ ಸಮ್ಮತವಾಗಿ ಸ್ಥಾಪನೆಯಾಗಬೇಕು: ನಿವೃತ್ತಿ ನ್ಯಾ. ಶಿವರಾಜ ಪಾಟೀಲ್