ದೇವಸ್ಥಾನದ ಗ್ರಿಲ್​ ತೆರವು ಕಾರ್ಯಾಚರಣೆಗೆ ಜನರಿಂದ ವಿರೋಧ

By

Published : Jun 22, 2023, 2:23 PM IST

thumbnail

ನವದೆಹಲಿ: ದೆಹಲಿಯ ಮಂಡವಾಲಿ ಪ್ರದೇಶದಲ್ಲಿನ ದೇವಾಸ್ಥಾನದ ಗ್ರಿಲ್​ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತೆರವು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ. ಮತ್ತೊಂದೆಡೆ, ದೇವಸ್ಥಾನದ ಗ್ರಿಲ್ ಮಾತ್ರ ತೆರವು ಮಾಡಲಾಗುತ್ತದೆ. ದೇವಸ್ಥಾನವನ್ನಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ವಿರೋಧಿಸಿ ಅಲ್ಲಿ ನೆರೆದಿದ್ದ ಜನರು ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದ ಪೊಲೀಸರ ವಿರುದ್ಧವು ವಾಗ್ವಾದಕ್ಕಿಳಿದಿದ್ದಾರೆ. ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇವಾಲಯ ನಿರ್ಮಾಣವಾಗಿ ಯಾರೂ ದೇವಸ್ಥಾನದ ಗ್ರಿಲ್ ತೆರವುಗೊಳಿಸುವುದಾಗಿ ಹೇಳಿರಲಿಲ್ಲ ಇದೀಗಾ ಏಕಾಏಕಿ ತೆರವು ಗೊಳಿಸಲಾಗುತ್ತದೆ. ಈ ದೇವಾಲಯ 20 ವರ್ಷಗಳಿಂದ ಇಲ್ಲಿದೆ ಎಂದು ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ

ದೇವಸ್ಥಾನದಲ್ಲಿ ಕೆಲ ಭಾಗ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಆಡಳಿತ ಮಂಡಳಿಗೆ ಯಾರೋ ದೂರು ನೀಡಿದ್ದಾರೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಬಳಿಕ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದು ದೇವಸ್ಥಾನದ ಗ್ರಿಲ್ ತೆರವುಗೊಳಿಸಿದ್ದಾರೆ.  

ಇದನ್ನೂ ಓದಿ: ಪ್ರಾರ್ಥನಾ ಸ್ಥಳದ ವಿಚಾರವಾಗಿ ಪೊಲೀಸರ ಮೇಲೆ ಕಲ್ಲು ತೂರಾಟ: ಓರ್ವ ವ್ಯಕ್ತಿ ಸಾವು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.