ಗುರುನಾನಕ್ ಜಯಂತಿ: ಸ್ವರ್ಣ ಮಂದಿರಕ್ಕೆ ಹರಿದು ಬಂದ ಭಕ್ತ ಸಾಗರ - ವಿಡಿಯೋ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
Published : Nov 27, 2023, 5:14 PM IST
ಅಮೃತಸರ(ಪಂಜಾಬ್): ಸಿಖ್ ಧರ್ಮದ ಸಂಸ್ಥಾಪಕ ಮತ್ತು ಅವರ ಮೊದಲ ಧರ್ಮಗುರು ಗುರುನಾನಕ್ ಅವರ ಜಯಂತಿಯನ್ನು ವಿಶ್ವದಾದ್ಯಂತ ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹೇಬ್ ಗುರುದ್ವಾರ (ಗೋಲ್ಡನ್ ಟೆಂಪಲ್)ಗೆ ಲಕ್ಷಾಂತರ ಭಕ್ತರು ಆಮಿಸಿ, ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹೇಬರ ದರ್ಶನ ಪಡೆದು, ಸರೋವರದಲ್ಲಿ ಸ್ನಾನ ಮಾಡಿದರು. ನಂತರ ಪ್ರಕಾಶ್ ಪುರಬ್ ಆಚರಿಸಿದರು. ಈ ವೇಳೆ ಶ್ರೀ ಗುರುನಾನಕ್ ದೇವ್ ಜಿಯವರ ಪ್ರಕಾಶ ಪುರಬ್‌ನಲ್ಲಿ ಸಿಖ್ ಸಂಗತ್‌ಗೆ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಅಕಲ್ ತಖ್ತ್ ಸಾಹೇಬ್ನ ಜತೇದಾರ್ ಗಿಯಾನಿ ರಘ್ಬೀರ್ ಸಿಂಗ್ ಅವರು, ದೇಶ - ವಿದೇಶಗಳಲ್ಲಿ ನೆಲೆಸಿರುವ ಗುರುನಾನಕ್ ಅವರ ಅನುಯಾಯಿಗಳಿಗೆ ಶುಭಾಶಯ ತಿಳಿಸಿ, ನಾವು ಗುರುನಾನಕ್ರ ಸಂದೇಶಗಳನ್ನು ಅನುಸರಿಸಬೇಕು ಎಂದು ಸಿಖ್ ಸಮುದಾಯಕ್ಕೆ ಕರೆ ನೀಡಿದರು.
ದೆಹಲಿಯಿಂದ ಬಂದಿದ್ದ ಭಕ್ತೆ ಮಾತನಾಡಿ, ಎಂಟು ವರ್ಷಗಳ ನಂತರ ಇಂದು ಗೋಲ್ಡನ್ ಟೆಂಪಲ್ಗೆ ಬಂದಿದ್ದೇನೆ. ಇಲ್ಲಿಗೆ ಬಂದಿದ್ದರಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದರು. ಸ್ವರ್ಣ ಮಂದಿರಕ್ಕೆ ಆಗಮಿಸಿದ್ದ ಬಾಲಕನೊಬ್ಬ ಮಾತನಾಡಿ, ಗುರುದ್ವಾರಕ್ಕೆ ಬಂದು ಗುರುನಾನಕ್ ದೇವ್ ಜಿ ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಮತ್ತು ಯುವ ಜನರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು: ಗೊಮ್ಮಟಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ