ದಾವಣಗೆರೆ: ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ ಪೊಲೀಸ್​ ಸಿಬ್ಬಂದಿ - annual sports event at davanagere

🎬 Watch Now: Feature Video

thumbnail

By ETV Bharat Karnataka Team

Published : Nov 22, 2023, 2:08 PM IST

ದಾವಣಗೆರೆ : ಜಿಲ್ಲಾ ಪೊಲೀಸರು ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ಸಕತ್​ ಎಂಜಾಯ್ ಮಾಡಿದರು. ಕಾನ್ಸ್‌ಟೇಬಲ್​ನಿಂದ ಹಿಡಿದು ಎಸ್​ಪಿ ಹುದ್ದೆಯ ತನಕ ಪ್ರತಿಯೊಬ್ಬ ಅಧಿಕಾರಿಗಳು ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದರು. ಡಿವೈಎಸ್​ಪಿ, ಪಿಎಸ್ಐಗಳು ಕೂಡ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಪ್ರೋತ್ಸಾಹ ನೀಡಿದರು.  

ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಗುಂಡು ಎಸೆತ, ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಕಬಡ್ಡಿ, ಕ್ರಿಕೆಟ್, ಹೈ ಜಂಪ್, ಲಾಂಗ್ ಜಂಪ್ ಹೀಗೆ ನಾನಾ ಕ್ರೀಡೆಗಳನ್ನು ಆಡುವ ಮೂಲಕ ಸಿಬ್ಬಂದಿ ಫುಲ್ ಎಂಜಾಯ್ ಮಾಡಿದರು. ಕೆಲ ಕ್ರೀಡೆಗಳು ಡಿಆರ್ ಕವಾಯತು ಮೈದಾನದಲ್ಲಿ ನಡೆದರೆ ಮತ್ತೆ ಕೆಲ ಆಟಗಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಮಹಿಳಾ ಪೊಲೀಸ್ ಸಿಬ್ಬಂದಿ 100 ಮೀಟರ್ ಓಟ, 400 ಮೀಟರ್ ಓಟದಲ್ಲಿ ಭಾಗವಹಿಸಿ ಗೆಲುವಿಗಾಗಿ ಸೆಣಸಾಟ ನಡೆಸಿದರು. ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಕೆಲಸದ ಒತ್ತಡವನ್ನು ಬದಿಗಿಟ್ಟು ಜಿಲ್ಲೆಯ ವಿವಿಧ ಠಾಣೆಗಳ ಸಿಬ್ಬಂದಿ ಭಾಗಿಯಾಗಿದ್ದಾರೆ. 

ಇದನ್ನೂ ಓದಿ : ಕಾರವಾರ : ಕೆಸರಲ್ಲಿ ಓಟ, ಹಗ್ಗಜಗ್ಗಾಟ ; ಗ್ರಾಮೀಣ ಕ್ರೀಡಾ ಸೊಗಡಿನಲ್ಲಿ ಮಿಂದೆದ್ದ ಯುವಜನತೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.