ದೊಡ್ಡಾಟದಲ್ಲಿ ವೃಷಸೇನ ಪಾತ್ರ.. ಇನ್ಸ್ಪೆಕ್ಟರ್ ಕಾಲಿಮಿರ್ಚಿ ಕಲೆಗೆ ಮನಸೋತ ಜನ - ಪೊಲೀಸ್ ಅಧಿಕಾರಿ ಗಮನ
🎬 Watch Now: Feature Video

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಾಂಪ್ರದಾಯಿಕ ಪ್ರಸಿದ್ಧ ಕಲೆ ದೊಡ್ಡಾಟದಲ್ಲಿ ನಗರದ ಪೊಲೀಸ್ ಅಧಿಕಾರಿಯೊಬ್ಬರು ಬಣ್ಣ ಹಚ್ಚಿ ಕಲಾಭಿಮಾನಿಗಳು ಮನರಂಜಿಸಿದ್ದಾರೆ. ಡಾ. ಚಂದ್ರಶೇಖರ ಕಂಬಾರ ಅವರ ದತ್ತಿ ಕಾರ್ಯಕ್ರಮದಲ್ಲಿ ಕರ್ಣಪರ್ವ ಎಂಬ ದೊಡ್ಡಾಟದಲ್ಲಿ ಕಲೆ ಪ್ರದರ್ಶಿಸುವ ಮೂಲಕ ಪೊಲೀಸ್ ಅಧಿಕಾರಿ ಗಮನ ಸೆಳೆದರು. ಈ ದೊಡ್ಡಾಟದಲ್ಲಿ ಗೋಕುಲ ರಸ್ತೆಯ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಜೆಎಮ್ ಕಾಲಿಮಿರ್ಚಿ ಅವರು ವೃಷಸೇನ (ಕರ್ಣನ ಮಗ) ಪಾತ್ರದಲ್ಲಿ ವಿಶೇಷ ವೇಷಭೂಷಣ ಧರಿಸಿ ಕಲಾಭಿಮಾನಿಗಳನ್ನು ಮನರಂಜಿದರು. ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರ ಕಲೆಯನ್ನು ಸಾರ್ವಜನಿಕರು ಕೊಂಡಾಡಿದ್ದು, ಪೊಲೀಸ್ ಇಲಾಖೆ ಕೂಡಾ ಪ್ರಶಂಸೆ ವ್ಯಕ್ತಪಡಿಸಿದೆ.
Last Updated : Feb 3, 2023, 8:27 PM IST