Watch... ದಂಪತಿ ವಿರುದ್ಧ ಪೊಲೀಸರ ದೌರ್ಜನ್ಯ ಆರೋಪ.. ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
🎬 Watch Now: Feature Video
ಆದೋನಿ (ಆಂಧ್ರಪ್ರದೇಶ): ಇಲ್ಲಿಯ ಶರಫ್ ಬಜಾರ್ ಬಳಿ ಗುರುವಾರದಂದು ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿದ್ದ ದ್ವಿಚಕ್ರ ವಾಹನಗಳ ಪೆನಾಲ್ಟಿ ಶುಲ್ಕವನ್ನ ಪೊಲೀಸರು ಸಂಗ್ರಹ ಮಾಡುತ್ತಿದ್ದರು. ಈ ವೇಳೆ ದಂಪತಿಯ ಜೊತೆ ಪೊಲೀಸರು ದೌರ್ಜನ್ಯ ರೂಪದಲ್ಲಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಾಹನದ ಮೇಲಿರುವ ದಂಡದ ಬಾಕಿಯನ್ನು ಪಾವತಿಸುವಂತೆ ಪೊಲೀಸರು ದಂಪತಿಯನ್ನು ಕೇಳಿದ್ದಾರೆ. ಸದ್ಯ ನಮ್ಮ ಬಳಿ ಹಣವಿಲ್ಲ ಎಂದು ದಂಪತಿ ತಿಳಿಸಿದ್ದಾರೆ. ಇದರಿಂದಾಗಿ ಕೆಲ ಕಾಲ ವಾಗ್ವಾದ ನಡೆದಿದೆ. ಅಷ್ಟೇ ಅಲ್ಲ ಪೊಲೀಸರು ಸವಾರನ ಕೊರಳ ಪಟ್ಟಿ ಹಿಡಿದು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ಬೋರ್ಗೆ ವಾಹನ ಡಿಕ್ಕಿ: ಚಾಲಕನ ಹೊಟ್ಟೆಗೆ ಚುಚ್ಚಿದ ಬೋರ್ ಹಿಡಿಕೆ... ವಿಡಿಯೋ