ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಮೇಲೆ ವಿಷಕಾರಿ ಹಾವುಗಳು ಪ್ರತ್ಯಕ್ಷ.. ಜನರಿಗೆ ಆತಂಕ - ಉತ್ತರಾಖಂಡ ಪ್ರವಾಹ
🎬 Watch Now: Feature Video
ಹರಿದ್ವಾರ : ಉತ್ತರಾಖಂಡ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಬೆನ್ನಲ್ಲೇ ಇದೀಗ ನೀರಿನಲ್ಲಿ ವಿಷಪೂರಿತ ಹಾವುಗಳು ಬರಲಾರಂಭಿಸಿದ್ದು, ಜನಸಾಮಾನ್ಯರು ಭಯಭೀತರಾಗಿದ್ದಾರೆ.
ಮೇನ್ ಬಜಾರ್ನಲ್ಲಿ ನಿಂತ 5 ಅಡಿ ನೀರು : ಲಕ್ಸಾರ್ ಮೇನ್ ಬಜಾರ್ನಲ್ಲಿ ಹಾವುಗಳು ರಸ್ತೆಗೆ ಬರುತ್ತಿವೆ. ಕಳೆದ ದಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರವಾಹ ಪ್ರದೇಶಗಳ ಸಮೀಕ್ಷೆಗಾಗಿ ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಲಕ್ಸಾರ್‌ನ ಸಂತ ಕಾಲೋನಿಯಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ವಿಷಕಾರಿ ಹಾವನ್ನು ರಕ್ಷಿಸಿ ಕೊಂಡೊಯ್ದಿದ್ದಾರೆ.
ಭಾರಿ ಮಳೆ ಹಿನ್ನೆಲೆ ರಾಜ್ಯದ ಕೆಲವೆಡೆ ಗುಡ್ಡಗಳಲ್ಲಿ ಬಿರುಕು ಕಾಣಿಸಿಕೊಂಡು ಭೂಕುಸಿತ ಸಂಭವಿಸಿದೆ. ಇದರಿಂದಾಗಿ, ಚಾರ್ಧಾಮ್ ಯಾತ್ರೆಗೆ ಬಂದ ಯಾತ್ರಾರ್ಥಿಗಳು ಹಲವೆಡೆ ಸಿಕ್ಕಿಹಾಕಿಕೊಂಡಿದ್ದಾರೆ. ಒಂದೆಡೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಗಳಲ್ಲಿಯೇ ಕುಳಿತಿದ್ದಾರೆ. ಮತ್ತೊಂದೆಡೆ, ಪ್ರತಿ ರಸ್ತೆಯಲ್ಲೂ ಹಾವುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಲು ಹೆದರುತ್ತಿದ್ದಾರೆ.
ಇದನ್ನೂ ಓದಿ : ಭಾರಿ ಮಳೆಗೆ ಮುಂಬೈ ತಲ್ಲಣ.. ತಗ್ಗು ಪ್ರದೇಶಗಳು ಜಲಾವೃತ, ಸಂಚಾರ ಅಸ್ತವ್ಯಸ್ತ