ಜೂನ್ 21ರಿಂದ ಮೋದಿ ಅಮೆರಿಕ ಪ್ರವಾಸ: ಸ್ವಾಗತ ಕೋರಿದ ಸೆನೆಟರ್ ಸಿಂಡಿ ಹೈಡ್ -ಸ್ಮಿತ್ - ಪ್ರಧಾನಿ ಮೋದಿ ಜೂನ್ 21ರಿಂದ ಅಮೆರಿಕ ಪ್ರವಾಸ
🎬 Watch Now: Feature Video
ವಾಷಿಂಗ್ಟನ್ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜೂನ್ 21 ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು 2021ರ ಬಳಿಕ ತಮ್ಮ ಮೊದಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ನಂತರ ಅವರು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 22 ರಂದು ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರ ಜೊತೆ ಮೋದಿ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಮೋದಿ- ಬೈಡನ್ ಸಭೆಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಂಧವನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಲಿದ್ದಾರೆ
ಈ ಹಿನ್ನೆಲೆ "ಮುಂದಿನ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕನ್ನರು ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಒತ್ತಿಹೇಳುವ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರನ್ನು ನಾವು ಗೌರಪೂರ್ವಕವಾಗಿ ಸ್ವಾಗತಿಸುತ್ತೇವೆ" ಎಂದು ಯುಎಸ್ ಸೆನೆಟರ್ ಸಿಂಡಿ ಹೈಡ್-ಸ್ಮಿತ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Memorial Wall: ಭಾರತದ ಪ್ರಸ್ತಾವನೆಗೆ 190 ದೇಶಗಳು ಬೆಂಬಲ, ಧನ್ಯವಾದ ಅರ್ಪಿಸಿದ ಮೋದಿ