ಅಧಿವೇಶನ ಕೆಲವೇ ದಿನ ನಡೆಯಬಹುದು, ಆದ್ರೆ ಐತಿಹಾಸಿಕ ವ್ಯಾಪ್ತಿ ಹೊಂದಿದೆ: ಮೋದಿ - ಪ್ರಧಾನಮಂತ್ರಿ ನರೇಂದ್ರ ಮೋದಿ
🎬 Watch Now: Feature Video


Published : Sep 18, 2023, 11:37 AM IST
ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಆರಂಭಕ್ಕೂ ಮುನ್ನ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್ ಭವನದ ಮುಂದೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಜಿ20 ಶೃಂಗಸಭೆ ಮತ್ತು ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದರು. ಜಿ20 ಶೃಂಗಸಭೆಯಲ್ಲಿ ನಾವು ಜಾಗತಿಕ ದಕ್ಷಿಣದ (Global South) ಧ್ವನಿಯಾಗಿದ್ದು, ಇದು ಭಾರತ ಗರ್ವಪಡುವ ವಿಷಯ ಎಂದರು.
ಜಿ20ಗೆ ಆಫ್ರಿಕನ್ ಒಕ್ಕೂಟದ ಶಾಶ್ವತ ಸದಸ್ಯತ್ವ ಮತ್ತು ಸರ್ವಾನುಮತದ ದೆಹಲಿ ಘೋಷಣೆ ಈ ಎಲ್ಲಾ ವಿಷಯಗಳು ಭಾರತದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾನುವಾರ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ 'ಯಶೋಭೂಮಿ'ಯನ್ನು ದೇಶಕ್ಕೆ ಅರ್ಪಿಸಲಾಗಿದೆ ಎಂದರು. ಇದೇ ವೇಳೆ ಚಂದ್ರಯಾನ-3ರ ಬಗ್ಗೆ ಮಾತನಾಡಿದ ಪ್ರಧಾನಿ, ಚಂದ್ರಯಾನ3 ಯಶಸ್ಸಿನಿಂದ ಚಂದ್ರನ ಮೇಲೆ ನಮ್ಮ ರಾಷ್ಟ್ರೀಯ ಧ್ವಜ ಹಾರಾಡುತ್ತಿದೆ. ವಿಕ್ರಮ್ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್ ಹೊಸ ಸ್ಪೂರ್ತಿಯ ಕೇಂದ್ರವಾಗಿದೆ.
ವಿಶೇಷ ಅಧಿವೇಶನದ ಬಗ್ಗೆ ಮಾತನಾಡುತ್ತಾ, ಅಧಿವೇಶನ ಕೆಲವೇ ದಿನ ನಡೆಯಬಹುದು, ಆದ್ರೆ ಐತಿಹಾಸಿಕ ವ್ಯಾಪ್ತಿ ಹೊಂದಿದೆ. 75 ವರ್ಷಗಳ ಪ್ರಯಾಣ ಇನ್ನು ಮುಂದೆ ಹೊಸ ಸ್ಥಳದಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಇಂದಿನಿಂದ ವಿಶೇಷ ಅಧಿವೇಶನ: ಹಳೆ ಕಟ್ಟಡದಲ್ಲಿ ಮೊದಲ ದಿನದ ಕಲಾಪ, ನಾಳೆಯಿಂದ ಹೊಸ ಸಂಸತ್ ಭವನಕ್ಕೆ ಶಿಫ್ಟ್