ದೆಹಲಿಯಿಂದ ಪ್ಯಾರಿಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ- ವಿಡಿಯೋ - ಫ್ರಾನ್ಸ್‌ನ ಪ್ಯಾರಿಸ್‌ಗೆ ಪಿಎಂ ಪ್ರಯಾಣ
🎬 Watch Now: Feature Video
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ವಿದೇಶ ಪ್ರವಾಸ ಆರಂಭವಾಗಿದೆ. ಇಂದು ಬೆಳಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ಗೆ ಅವರು ಪ್ರಯಾಣ ಬೆಳೆಸಿದರು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನದ ಮೇರೆಗೆ ಮೋದಿ ಭೇಟಿ ನೀಡುತ್ತಿದ್ದಾರೆ. ನಾಳೆ ನಡೆಯಲಿರುವ ಬಾಸ್ಟಿಲ್ ಡೇ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಳ್ಳುವರು.
ಫ್ರಾನ್ಸ್ ಭೇಟಿಯ ಸಮಯದಲ್ಲಿ ಮೋದಿ ಅವರು ಮ್ಯಾಕ್ರನ್ ಮತ್ತು ಇತರೆ ಗಣ್ಯರೊಂದಿಗೆ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಭಾರತೀಯ ಸಮುದಾಯ ಮತ್ತು ಉನ್ನತ ಮಟ್ಟದ ಸಿಇಒಗಳೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವಿದೆ. ಫ್ರೆಂಚ್ ಅಧ್ಯಕ್ಷರು ಭಾರತದ ಪ್ರಧಾನಿಗೆ ಗೌರವಾರ್ಥವಾಗಿ ಅಧಿಕೃತ ಔತಣಕೂಟ ಮತ್ತು ಖಾಸಗಿ ಭೋಜನ ಕೂಟವನ್ನೂ ಆಯೋಜಿಸಲಿದ್ದಾರೆ.
ಫ್ರಾನ್ಸ್ ಪ್ರವಾಸದ ಬಳಿಕ ಶುಕ್ರವಾರ ಮೋದಿ ಅಬು ಧಾಬಿಗೆ ಆಗಮಿಸಲಿದ್ದು, ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು.
ಇದನ್ನೂ ಓದಿ : PM Modi foreign tour : ನಾಳೆಯಿಂದ ಪ್ರಧಾನಿ ವಿದೇಶ ಪ್ರವಾಸ; ಫ್ರಾನ್ಸ್, ಯುಎಇ ಭೇಟಿ