ಜಿ-20 ಶೃಂಗದ ನಡುವೆ ಪ್ರಧಾನಿ ಮೋದಿ, ಇಂಗ್ಲೆಂಡ್ ಪ್ರಧಾನಿ ಸುನಕ್ ದ್ವಿಪಕ್ಷೀಯ ಸಭೆ; ವಿಡಿಯೋ
🎬 Watch Now: Feature Video
Published : Sep 9, 2023, 4:25 PM IST
ನವದೆಹಲಿ: ಜಿ-20 ಶೃಂಗಸಭೆಗೆ ಆಗಮಿಸಿರುವ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು. ವ್ಯಾಪಾರ ಸಂಬಂಧಗಳ ವೃದ್ಧಿ, ಹೂಡಿಕೆಯ ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಜಿ 20 ಶೃಂಗಸಭೆಗೆ ಶುಕ್ರವಾರ ಭಾರತಕ್ಕೆ ಆಗಮಿಸಿರುವ ಸುನಕ್, ಸಭೆಯಲ್ಲಿ ಭಾಗಿಯಾದ ನಂತರ ಮೋದಿ ಅವರೊಂದಿಗೆ ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ನಾನೊಬ್ಬ ಹೆಮ್ಮೆಯ ಹಿಂದು ಎಂದು ಹೇಳಿಕೊಳ್ಳುವ ಸುನಕ್ ಅವರು, ಮೋದಿ ಅವರನ್ನು ಭೇಟಿ ವೇಳೆ ನಮಸ್ತೆ ಎಂದು ಹೇಳಿದ್ದರು.
ದ್ವಿಪಕ್ಷೀಯ ಸಭೆಯ ನಂತರ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ದೆಹಲಿಯಲ್ಲಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಿರುವುದು ಅದ್ಭುತವಾಗಿದೆ. ನಾವು ವ್ಯಾಪಾರ ಸಂಬಂಧಗಳ ವೃದ್ಧಿ ಮತ್ತು ಹೂಡಿಕೆಯ ಹೆಚ್ಚಳದ ಮಾರ್ಗಗಳ ಬಗ್ಗೆ ಚರ್ಚಿಸಿದೆವು. ಭಾರತ ಮತ್ತು ಇಂಗ್ಲೆಂಡ್ ಸಮೃದ್ಧ ಮತ್ತು ಸುಸ್ಥಿರ ಭೂಮಿಗಾಗಿ ಕೆಲಸ ಮಾಡುತ್ತಲೇ ಇರುತ್ತವೆ ಎಂದು ಅವರು ಹೇಳಿದರು.
ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜಪಾನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಇದನ್ನೂ ಓದಿ: G20 Summit: ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಸನದ ಮುಂದೆ 'ಭಾರತ' ಕಾರ್ಡ್