'ಸೆಂಗೋಲ್'ಗೆ ಪ್ರಧಾನಿ ಮೋದಿಯಿಂದ ಸಾಷ್ಟಾಂಗ ನಮಸ್ಕಾರ - ವಿಡಿಯೋ - ನೂತನ ಸಂಸತ್ ಭವನ
🎬 Watch Now: Feature Video
ನವದೆಹಲಿ: 75 ವರ್ಷಗಳ ಸ್ವಾತಂತ್ರ್ಯದ ನಂತರ ನಮ್ಮದೇ ಆದ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮವು ಮಂತ್ರಘೋಷಗಳ ನಡುವೆ ನಡೆಯಿತು. ಇದೆ ವೇಳೇ ರಾಜದಂಡವಾದ 'ಸೆಂಗೋಲ್'ನ ಹಸ್ತಾಂತರವನ್ನು ತಮಿಳುನಾಡಿನ ವಿವಿಧ ಅಧೀನಂಗಳಿಂದ ಪ್ರಧಾನಿ ಮೋದಿಯವರಿಗೆ ಮಾಡಲಾಯಿತು. ಸೆಂಗೋಲ್ನ್ನು ಪಡೆಯುವ ಮುನ್ನ ಮೋದಿಯವರು ಪೂಜ್ಯರ ಆರ್ಶೀವಾದ ಪಡೆಯುತ್ತಾ, ರಾಜದಂಡದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿರುವುದು ವಿಶೇಷವಾಗಿತ್ತು.
ನಮಸ್ಕಾರದ ಬಳಿಕ ಸೆಂಗೋಲ್ನ್ನು ತಮ್ಮ ಕೈಗೆ ಪಡೆದ ಪ್ರಧಾನಿಯವರು ರಾಜದಂಡದೊಂದಿಗೆ ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ಸೆಂಗೋಲ್ ಅನ್ನು ಕೊಂಡೊಯ್ದರು. ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಇಡಲಾಗಿದ್ದ ಜ್ಯೋತಿಯನ್ನು ಬೆಳಗಿಸುವ ಮೂಲಕ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಂಸತ್ತಿನ ನೂತನ ಕಟ್ಟಡದ ಲಾಬಿಯಲ್ಲಿ ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮ ಕೂಡ ನಡೆದಿದೆ.
ಇದನ್ನೂ ಓದಿ: ಏನಿದು ಸೆಂಟ್ರಲ್ ವಿಸ್ತಾ, ಇದರ ಪುನರಾಭಿವೃದ್ಧಿ ಯೋಜನೆಗಳೇನು?