Modi in Egypt: ಈಜಿಪ್ಟ್‌ನಲ್ಲಿ ಬೋಹ್ರಾ ಮುಸ್ಲಿಮರು, ಭಾರತೀಯ ವಲಸಿಗರನ್ನು ಭೇಟಿಯಾದ ಮೋದಿ: ವಿಡಿಯೋ - ಪ್ರಧಾನಿ ನರೇಂದ್ರ ಮೋದಿ
🎬 Watch Now: Feature Video
ಕೈರೋ (ಈಜಿಪ್ಟ್): ಈಜಿಪ್ಟ್ ದೇಶಕ್ಕೆ ತಮ್ಮ ಚೊಚ್ಚಲ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಲಸಿಗರು ಮತ್ತು ಬೋಹ್ರಾ ಮುಸ್ಲಿಂ ಸಮುದಾಯದ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾದ ಕೈರೋದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಇಂದು (ಭಾನುವಾರ) ಭೇಟಿ ನೀಡುವ ಮೊದಲು ಮೋದಿ ಬೋಹ್ರಾ ಸದಸ್ಯರೊಂದಿಗೆ ಬೆರೆತರು.
"ಬೋಹ್ರಾ ಸಮುದಾಯಕ್ಕೆ ಸೇರಿದ ನಾನು ಕಳೆದ 27 ವರ್ಷಗಳಿಂದ ಈಜಿಪ್ಟ್‌ನಲ್ಲಿ ವಾಸಿಸುತ್ತಿದ್ದೇನೆ. ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು ಒಂದು ವಿಶೇಷ ಅನುಭವ. ಅವರು ನಮ್ಮ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ನಮ್ಮ ಪ್ರಧಾನಿ ನಮ್ಮನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ" - ಭಾರತೀಯ ವಲಸಿಗರ ಸದಸ್ಯ.
ಇದಕ್ಕೂ ಮುನ್ನ ಇಲ್ಲಿನ ರಿಟ್ಜ್ ಕಾರ್ಲ್‌ಟನ್ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಭಾರತೀಯ ವಲಸಿಗರು ಮೋದಿ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಭಾರತೀಯ ತ್ರಿವರ್ಣ ಧ್ವಜ ಬೀಸುತ್ತಾ, ಭಾರತೀಯ ಸಮುದಾಯದ ಸದಸ್ಯರು ಹೋಟೆಲ್ ತಲುಪಿದಾಗ 'ಮೋದಿ, ಮೋದಿ' ಮತ್ತು 'ವಂದೇ ಮಾತರಂ' ಘೋಷಣೆಗಳು ಮೊಳಗಿದವು. ಈ ವೇಳೆ ಈಜಿಪ್ಟ್ ಮಹಿಳೆ ಜೆನಾ ಎಂಬವರು, ಸೀರೆಯುಟ್ಟು 'ಶೋಲೆ' ಚಿತ್ರದ ಜನಪ್ರಿಯ ಹಾಡು 'ಯೇ ದೋಸ್ತಿ ಹಮ್ ನಹೀ ಛೋಡೆಂಗೆ' ಹಾಡುವ ಮೂಲಕ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
"ಕಳೆದ 26 ವರ್ಷಗಳಿಂದ ನಾನು ಇಲ್ಲಿ ವಾಸಿಸುತ್ತಿದ್ದೇನೆ. ಅನೇಕರ ಪ್ರೀತಿಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರು ಕೈರೋದಲ್ಲಿ ಇರುವುದರಿಂದ ಇದು ನಮಗೆ ಸಂಭ್ರಮದ ದಿನ. ಅವರನ್ನು ಭೇಟಿಯಾಗಲು ನಮಗೆ ತುಂಬಾ ಸಂತೋಷವಾಗಿದೆ. ಭಾರತದ ನಂಟು ನಮ್ಮ ರಕ್ತನಾಳಗಳಲ್ಲಿ ಹರಿಯುತ್ತಿದೆ. ಇಲ್ಲಿ ಹಲವಾರು ಸಹ-ದೇಶವಾಸಿಗಳನ್ನು ಭೇಟಿ ಮಾಡುವುದರಿಂದ ನಾವು ಒಂದಾಗಿದ್ದೇವೆ. ಪ್ರಧಾನಿ ಮೋದಿಯವರಿಗೆ ಇಲ್ಲಿ ಆರಾಮದಾಯಕ ಮತ್ತು ಆಹ್ಲಾದಕರವಾದ ವಾಸ್ತವ್ಯವನ್ನು ನಾವು ಬಯಸುತ್ತೇವೆ" ಎಂದು ಇನ್ನೊಬ್ಬ ಭಾರತೀಯ ವಲಸಿಗ ಹೇಳಿದರು.
ಇದನ್ನೂ ಓದಿ: Modi in Egypt: ಭಾರತದ ಕೋಮು ಸೌಹಾರ್ದತೆ, ಮೋದಿ ನಾಯಕತ್ವ, ಸಮಾನ ಹಕ್ಕುಗಳಿಗೆ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿ ಮೆಚ್ಚುಗೆ