G-20 Summit : ಪಂಜಾಬಿನ ಸಾಂಪ್ರದಾಯಿಕ ಫುಲ್ಕಾರಿ ಕಸೂತಿಗೆ ವಿದೇಶಿಗರು ಫಿದಾ - ಪಟಿಯಾಲದ ತ್ರಿಪುರ ನಿವಾಸಿಯಾದ ಲಜ್ವಂತಿ
🎬 Watch Now: Feature Video
Published : Sep 9, 2023, 8:04 PM IST
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದೆ. ಶೃಂಗಸಭೆಯ ಸಂದರ್ಭದಲ್ಲಿ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತಿದ್ದು, ಪಂಜಾಬಿನ ಸಾಂಪ್ರದಾಯಿಕ ಕಸೂತಿ ಫುಲ್ಕಾರಿ ಪ್ರದರ್ಶನ ಏರ್ಪಡಿಸಲಾಗಿದೆ.
2021ರಲ್ಲಿ ಲಜ್ವಂತಿ ಅವರಿಗೆ ಫುಲ್ಕಾರಿ ಕಸೂತಿಗೆ ಜಾಗತಿಕ ಮನ್ನಣೆ ನೀಡಿದ್ದಕ್ಕೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು. ಪಂಜಾಬ್ನ ಪಟಿಯಾಲದ ತ್ರಿಪುರ ನಿವಾಸಿಯಾದ ಲಜ್ವಂತಿ ಅವರು ತಮ್ಮ ಆರನೇ ವಯಸ್ಸಿನಲ್ಲಿ ಅಜ್ಜಿಯಿಂದ ಫುಲ್ಕಾರಿ ಕಲೆಯನ್ನು ಕರಗತ ಮಾಡಿಕೊಂಡರು. ಬಳಿಕ ಈ ಕಸೂತಿ ಕಲೆಯನ್ನು ಜಾಗತಿಕವಾಗಿ ಪರಿಚಿತಗೊಳಿಸಿ, ಇಂದು ಸಾವಿರಾರು ಮಹಿಳೆಯರಿಗೆ ಈ ಕಲೆಯನ್ನು ಕಲಿಸಿದ್ದಾರೆ. ಇಂದು ಲಜ್ವಂತಿ ಅವರು ಫುಲ್ಕಾರಿ ಕಸೂತಿಯನ್ನು ಜಿ-20 ಶೃಂಗಸಭೆಯ ಪಂಜಾಬ್ ಪೆವಿಲಿಯನ್ನಲ್ಲಿ ಪ್ರದರ್ಶಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಶ್ರೀ ಪುರಸ್ಕೃತ ಲಜ್ವಂತಿ ಅವರು, ನಾನು ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಪ್ರತೀ ಬಾರಿ ಭೇಟಿಯಾದಾಗಲೂ ನೀವು ಯಾವಾಗಲೂ ಕೆಲಸದಲ್ಲಿ ನಿರತರಾಗಿರುತ್ತೀರಿ ಎಂದು ಹೇಳುತ್ತಾರೆ. ನಾನು ಈ ಕಲೆಯನ್ನು ಜೀವಂತವಾಗಿರಿಸಲು ಇಷ್ಟಪಡುತ್ತೇನೆ. ಆದ್ದರಿಂದ ಎಲ್ಲ ಕಡೆ ಹೋಗಿ ಫುಲ್ಕಾರಿ ತರಬೇತಿ ನೀಡುತ್ತೇನೆ. ಈ ಸಂಬಂಧ ನನಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಖಾದಿ ಪ್ರಶಸ್ತಿಗಳು ಲಭಿಸಿದೆ. ಸದ್ಯ ನಾನು ಪಂಜಾಬ್ ಮಾತ್ರವಲ್ಲದೇ ಹರಿಯಾಣ, ಹಿಮಾಚಲ ಪ್ರದೇಶ, ಹರಿದ್ವಾರ, ಜಮ್ಮು ಕಾಶ್ಮೀರದಲ್ಲೂ ಈ ಕಸೂತಿ ತರಬೇತಿ ನೀಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : 73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ: ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ