ಕೆಂಡದ ಮೇಲೆ ನಡೆದು ವಿಭಿನ್ನ ಹೋಳಿ ಆಚರಣೆ- ವಿಡಿಯೋ - Etv Bharat Kannada

🎬 Watch Now: Feature Video

thumbnail

By

Published : Mar 7, 2023, 9:53 AM IST

ಗುಜರಾತ್​: ವಸಂತ ಕಾಲದ ಆರಂಭ ಮತ್ತು ಚಳಿಗಾಲದ ಮುಕ್ತಾಯವನ್ನು ಸೂಚಿಸುವ ಹಬ್ಬವೇ ಹೋಳಿ. ಈ ಹಬ್ಬವನ್ನು ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಹಿಂದೂ ಧರ್ಮೀಯರು ಸಂತಸ, ಸಂಭ್ರಮದಿಂದ ಆಚರಿಸುತ್ತಾರೆ. ಸಂಪ್ರದಾಯದಂತೆ ಭಾರತದಲ್ಲಿ ಹೋಳಿಯ ಹಿಂದಿನ ರಾತ್ರಿಯಂದು ಕಾಮದಹನ ನಡೆಯುತ್ತದೆ. ಮರುದಿನ ಬಣ್ಣದ ಓಕುಳಿಯಾಟ. ರಂಗುರಂಗಿನ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳುವ, ಎರಚಿಕೊಳ್ಳುವ ಮೂಲಕ ಹಿರಿಯರು ಕಿರಿಯರು ಎಲ್ಲರೂ ಆಚರಿಸಿ ರಂಗಿನೋಕುಳಿಯಲ್ಲೇ ಮಿಂದೇಳುತ್ತಾರೆ. 

ಆದರೆ, ಗುಜರಾತ್‌ ರಾಜ್ಯದ ಸೂರತ್​ ಜಿಲ್ಲೆಯ ಸರಸ್ ಎಂಬ ಗ್ರಾಮದಲ್ಲಿ ವಿಭಿನ್ನ ಹೋಳಿ ಆಚರಣೆ ಕಂಡುಬಂತು. ಹಬ್ಬದ ಹಿಂದಿನ ರಾತ್ರಿ ಇಲ್ಲಿ ಹೋಲಿಕಾ ದಹನ್‌ ಮಾಡುತ್ತಾರೆ. ಹೋಲಿಕಾ ದಹನ್ ಎಂದರೆ ಧಾರ್ಮಿಕ ದೀಪೋತ್ಸವದ ರಾತ್ರಿ. ಇದು ನೃತ್ಯ, ಹಾಡುಗಾರಿಕೆ ಮತ್ತು ಸ್ತೋತ್ರ ಪಠಣ ಒಳಗೊಂಡಿರುತ್ತದೆ. ಇದನ್ನು ಮಂಗಳಕರವೆಂದು ಜನರು ನಂಬುತ್ತಾರೆ. ಹೋಲಿಕಾ ದಹನ್​ ಮಾಡಿದ ನಂತರ ಗ್ರಾಮದ ಜನರು ಬೆಂಕಿ ಕೆಂಡದ ಮೇಲೆ ನಡೆಯುವುದು ಇಲ್ಲಿನ ವಿಶೇಷತೆ. ಹೋಲಿಕಾ ದಹನ​ ಮಾಡಿದ ಕೆಂಡದ ಮೇಲೆ ಕಾಲಿಟ್ಟರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಜತೆಗೆ ಜೀವನದ ದುಃಖ ದೂರವಾಗುತ್ತದೆ ಎಂಬುದು ನಂಬಿಕೆ. ಈ ನಿಟ್ಟಿನಲ್ಲಿ ನೂರಾರು ವರ್ಷಗಳಿಂದಲೂ ಸರಸ್​ ಗ್ರಾಮದಲ್ಲಿ ಇಂಥದ್ದೊಂದು ವಿಭಿನ್ನ ಆಚರಣೆ ಚಾಲ್ತಿಯಲ್ಲಿದೆ. 

ಇದನ್ನೂ ಓದಿ: ಹೋಳಿ 2023: ಹೋಲಿಕಾ ದಹನದ ಮಹತ್ವ, ಸಮಯ, ಆಚರಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.