ಅಥಣಿ: ನದಿ ತೀರದಲ್ಲಿ ಹೆಚ್ಚಾದ ಮೊಸಳೆ ಕಾಟ, ಜನರಲ್ಲಿ ಆತಂಕ - ETv Bharat news
🎬 Watch Now: Feature Video
ಬೆಳಗಾವಿ ಜಿಲ್ಲೆಯ ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದಂತೆ ತೀರದ ಗ್ರಾಮಗಳಲ್ಲಿ ಆಹಾರ ಅರಸಿ ಬರುವ ಮೊಸಳೆಗಳ ಹಾವಳಿ ಹೆಚ್ಚಾಗಿವೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕೃಷ್ಣಾ ನದಿ ತೀರದ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಹಳ್ಳದಲ್ಲಿ ಬೀಡು ಬಿಟ್ಟಿದ್ದ ಮೊಸಳೆಯನ್ನು ಮತ್ತು ಬಡಕುಂದ್ರಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಬೃಹತ್ ಎರಡು ಮೊಸಳೆಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
Last Updated : Feb 3, 2023, 8:32 PM IST