ಲಗೇಜ್ ಬ್ಯಾಗ್​​ಗೆ ಚಿನ್ನದ ನಟ್​​​​ ಬೋಲ್ಟ್.. ಚಿನ್ನಸಾಗಣೆಗೆ ಪ್ರಯಾಣಿಕನ ಖತರ್ನಾಕ್​ ಪ್ಲಾನ್! - bengaluru airport gold smuggling case

🎬 Watch Now: Feature Video

thumbnail

By

Published : Aug 18, 2023, 11:24 AM IST

Updated : Aug 18, 2023, 12:04 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಲಗೇಜ್ ಬ್ಯಾಗ್​​ಗೆ ಚಿನ್ನದ ನಟ್ ಬೋಲ್ಟ್ ಅಳವಡಿಸಿ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕನೊಬ್ಬ ಗುರುವಾರ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ ಕಂಡು ಕೆಲಕಾಲ ದಂಗಾಗಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಸ್ಟ್ 18 ರಂದು ದುಬೈನಿಂದ ಎಮಿರೇಟ್ಸ್ ವಿಮಾನ ಸಂಖ್ಯೆ 568ರಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಮಾಹಿತಿ ಬಂದಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆಯ ವಾಯು ಗುಪ್ತಚರ ಘಟಕವು ಪ್ರಯಾಣಿಕನನ್ನು ವಶಕ್ಕೆ ಪಡೆದು, ಆತನ ಲಗೇಜ್ ಬ್ಯಾಗ್ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಯಾಣಿಕನು ತನ್ನ ಲಗೇಜ್ ಬ್ಯಾಗ್​ಗೆ ಚಿನ್ನದ ನಟ್​​ ಬೋಲ್ಟ್​​ಗಳನ್ನು ಅಳವಡಿಸಿಕೊಂಡು ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಿಸಲು ಯತ್ನಿಸಿದ್ದ. ಇದನ್ನು ಕಂಡುಕೊಂಡ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು 267 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಾದರಕ್ಷೆ, ಒಳಉಡುಪಿನಲ್ಲಿದ್ದ ₹1.40 ಕೋಟಿ ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ!- ವಿಡಿಯೋ

Last Updated : Aug 18, 2023, 12:04 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.