ಪ್ಯಾಂಟ್ ಜಿಪ್ಲೈನ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ- ವಿಡಿಯೋ - ಅಕ್ರಮವಾಗಿ ಚಿನ್ನ ಸಾಗಣೆ
🎬 Watch Now: Feature Video
Published : Nov 8, 2023, 10:59 AM IST
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಹಾಗು ಮಾದಕ ವಸ್ತುಗಳನ್ನು ಸಾಗಣೆ ಮಾಡುವಾಗ ಪ್ರಯಾಣಿಕರು ಸಿಕ್ಕಿಬೀಳುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದೀಗ ಪ್ಯಾಂಟ್ ಜಿಪ್ ಒಳಗಡೆ ಚಿನ್ನವನ್ನು ಮಾರೆಮಾಚಿ ಇಟ್ಟು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಪ್ರಯಾಣಿಕನಿಂದ 18 ಲಕ್ಷ ರೂ ಮೌಲ್ಯದ 284 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.
ನವೆಂಬರ್ 6 ರಂದು ಶಾರ್ಜಾದಿಂದ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನು ತಪಾಸಣೆ ಮಾಡಲಾಗಿದ್ದು, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಯಾಣಿಕ ಪ್ಯಾಂಟ್ನ ಜಿಪ್ ಲೈನ್ ಒಳಗಡೆ ಮಾರೆಮಾಚಿ ಪೇಸ್ಟ್ ರೂಪದ ಚಿನ್ನವನ್ನು ಅಡಗಿಸಿಟ್ಟಿದ್ದನು. ಆರೋಪಿಯಿಂದ ಚಿನ್ನವನ್ನು ಜಪ್ತಿ ಮಾಡಲಾಗದ್ದು, ಇದರ ಜೊತೆಗೆ 3,300 ಸಿಗರೇಟ್ಗಳು ಮತ್ತು 324 ಸೌಂದರ್ಯವರ್ಧಕ ಪ್ಯಾಕೆಟ್ಗಳನ್ನೂ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಲಗೇಜ್ ಬ್ಯಾಗ್ಗೆ ಚಿನ್ನದ ನಟ್ ಬೋಲ್ಟ್.. ಚಿನ್ನಸಾಗಣೆಗೆ ಪ್ರಯಾಣಿಕನ ಖತರ್ನಾಕ್ ಪ್ಲಾನ್!