ಉಧಮ್ಪುರ್ದಲ್ಲಿ ಬಲೂನ್ಗಳೊಂದಿಗೆ ಹಾರಿಬಿಟ್ಟ ಪಾಕಿಸ್ತಾನದ ಧ್ವಜ ಪತ್ತೆ.. ಶ್ರೀನಗರದಲ್ಲಿ ವ್ಯಕ್ತಿ ಬಂಧನ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Sep 8, 2023, 7:27 PM IST
ಉಧಮ್ಪುರ್ (ಶ್ರೀನಗರ): ಬಿಳಿ ಮತ್ತು ಹಸಿರು ಬಣ್ಣದ ಬಲೂನ್ಗಳಿಗೆ ಪಾಕಿಸ್ತಾನದ ಧ್ವಜ ಕಟ್ಟಿ ಹಾರಿ ಬಿಡಲಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಸುನೇತಾರ್ ಗ್ರಾಮದಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪಾಕಿಸ್ತಾನ ಧ್ವಜ ಹಾಗೂ ಬಲೂನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಿಂದ ಹಾರಿ ಬಿಡಲಾಗಿದೆ ಎಂಬುದುರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ 2022ರ ನವೆಂಬರ್‌ನಲ್ಲಿ ಸಾಂಬಾದ ಘಗ್ವಾಲ್ ಪ್ರದೇಶದಲ್ಲಿ 'ಬಿಎಚ್‌ಎನ್' ಎಂದು ಬರೆದಿರುವ ಪಾಕಿಸ್ತಾನಿ ಧ್ವಜದ ಬಲೂನ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2021 ರ ಆಗಸ್ಟ್‌ನಲ್ಲಿ, ಪಂಜಾಬ್‌ನ ರೂಪನಗರದ ಸಂಡೋಯಾ ಗ್ರಾಮದ ಮೈದಾನದಲ್ಲಿ ಐ ಲವ್ ಪಾಕಿಸ್ತಾನ ಎಂದು ಬರೆದಿದ್ದ ಧ್ವಜಗಳು ಮತ್ತು ಬಲೂನ್‌ಗಳು ಪತ್ತೆಯಾಗಿದ್ದವು.
ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದವನ ಬಂಧನ: ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್)ನೊಂದಿಗೆ ಸಂಬಂಧ ಹೊಂದಿದ್ದ ಆರೋಪಿಯನ್ನು ಶ್ರೀನಗರದ ಬಟ್ಟಾ ಮಾಲು ಎಂಬ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮುಹಮ್ಮದ್ ಯವರ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಹ್ಯಾಂಡ್ ಗ್ರಾನೈಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೋಠಿ ಬಾಗ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಭವನ, ರಾಷ್ಟ್ರೀಯ ಯುದ್ಧ ಸ್ಮಾರಕದ ಮೇಲೆ ಪಾಕ್ ಉಗ್ರರ ಕಣ್ಣು