ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು; ನಾಲ್ವರ ಪ್ರಾಣ ಉಳಿಸಿತು ಸೀಟ್ ಬೆಲ್ಟ್ - ವಿಡಿಯೋ - ಸೀಟ್ ಬೆಲ್ಟ್ ಉಳಿಸಿತು ನಾಲ್ವರ ಪ್ರಾಣ
🎬 Watch Now: Feature Video
ಕೋಯಿಕ್ಕೋಡ್(ಕೇರಳ): ಕೇರಳದ ಕೋಯಿಕ್ಕೋಡ್ನ ಬಲುಶೇರಿ ಎಂಬಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಗು ಸೇರಿದಂತೆ 4 ಮಂದಿ ಪವಾಡ ಸದೃಶ್ಯ ಪಾರಾಗಿದ್ದಾರೆ. ಮಂಗಳವಾರ ರಾತ್ರಿ 10.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪರಿಣಾಮ ಮಗು ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಒಬ್ಬ ಮಹಿಳೆಗೆ ಮಾತ್ರ ಚಿಕ್ಕಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ಸುರಕ್ಷತಾ ಕ್ರಮವಾಗಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ನಾಲ್ವರೂ ಕಟ್ಟಿಪ್ಪಾರ ಮೂಲದವರಾಗಿದ್ದು, ಕಿನಾಲೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿರುವುದಾಗಿ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Watch... ಬೈಸಿಕಲ್ ಮೂಲಕ ಕಚೇರಿ ತಲುಪಿದ ಸಚಿವ ತೇಜ್ ಪ್ರತಾಪ್ ಯಾದವ್..