ಎಸ್ಐ ಪಿಸ್ತೂಲ್ ಕದ್ದು, ಪೊಲೀಸರ ಮೇಲೆಯೇ ಗುಂಡು ಹಾರಿಸಿದ ವ್ಯಕ್ತಿ: ವಿಡಿಯೋ ನೋಡಿ - man came to road with a gun
🎬 Watch Now: Feature Video
ನವದೆಹಲಿ: ಪತ್ನಿಯಿಂದ ದೂರವಾಗಿ ಖಿನ್ನತೆ ಒಳಗಾಗಿದ್ದ ವ್ಯಕ್ತಿಯೊಬ್ಬ ಶಸ್ತ್ರಾಸ್ತ್ರಗಳ ಸಮೇತ ಸಾರ್ವಜನಿಕವಾಗಿ ಓಡಾಡುತ್ತಿದ್ದಾಗ, ಬಂಧಿಸಲು ಬಂದ ಪೊಲೀಸರ ಪಿಸ್ತೂಲನ್ನೇ ಕಸಿದುಕೊಂಡ ಗುಂಡು ಹಾರಿಸಿದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥನನ್ನು ಕಡೆದು ಹಿಡಿದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವ್ಯಕ್ತಿಯನ್ನು ಕ್ರಿಶನ್ ಶೆರ್ವಾಲ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶೆರ್ವಾಲ್ ರಸ್ತೆ ಮೇಲೆ ಚಾಕು ಹಿಡಿದು ಓಡಾಡುತ್ತಿದ್ದುದನ್ನು ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಹಿಡಿಯುವಾಗ ಗಲಾಟೆ ಮಾಡಿದ ಆತ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಜಿತೇಂದರ್ ಪವಾರ್ ಅವರ ಮೇಲೆ ದಾಳಿ ಮಾಡಿ ಅವರ ಪಿಸ್ತೂಲ್ ಕದ್ದಿದ್ದಾನೆ.
ರಸ್ತೆಯಲ್ಲಿ ಓಡಾಡುತ್ತಾ ಗುಂಡು ಹಾರಿಸಿದ್ದಾನೆ. ಇದರಿಂದ ಜನರು ಚೆಲ್ಲಾಪಲ್ಲಿಯಾಗಿ ಓಡಿದ್ದಾರೆ. ಬಳಿಕ ಹೇಗೋ ಹರಸಾಹಸಪಟ್ಟ ಪೊಲೀಸರು ಶೆರ್ವಾನ್ನನ್ನು ಹಿಡಿದು ಆಸ್ಪತ್ರೆ ಸೇರಿಸಿದ್ದಾರೆ. ಇಡೀ ಘಟನೆ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ವಿರುದ್ಧ ಪೊಲೀಸರು ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: ಪುಲ್ವಾಮಾ: ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಆರಂಭ