ಭಾರತಕ್ಕೆ ಆಗಮಿಸಿರುವ ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್.. ನಾಳೆ ಬೆಂಗಳೂರಿಗೆ ಭೇಟಿ
🎬 Watch Now: Feature Video
ನವದೆಹಲಿ: ಭಾರತಕ್ಕೆ ಆಗಮಿಸಿರುವ ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಕೋರಲಾಯಿತು. ಈ ಸ್ವಾಗತ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಂಪುಟದ ಇತರ ಸಹೋದ್ಯೋಗಿಗಳು ಉಪಸ್ಥಿತರಿದ್ದರು. ಪ್ರಧಾನಿ ಮೋದಿ, ಜರ್ಮನಿಯ ತಮ್ಮ ಸಹವರ್ತಿ ಓಲಾಫ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಕೆಂಪು ಹಾಸಿನ ಸ್ವಾಗತ ಕೋರಿದರು.
ಸ್ವಾಗತದ ಬಳಿಕ ಮಾತನಾಡಿದ ಜರ್ಮನಿ ಚಾನ್ಸಲರ್, ‘ನಾವು ಈಗಾಗಲೇ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಈ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತೇವೆ. ನಮ್ಮ ದೇಶಗಳ ಅಭಿವೃದ್ಧಿ ಮತ್ತು ವಿಶ್ವದ ಶಾಂತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ನಾವು ಪರಸ್ಪರ ಸೌಹಾರ್ದಯುತವಾಗಿ ಚರ್ಚಿಸುತ್ತೇವೆ ಎಂದರು. ಇನ್ನು ಚಾನ್ಸಲರ್ ಸ್ಕೋಲ್ಜ್ ಅವರು ಇಂದು ಹಿರಿಯ ಅಧಿಕಾರಿಗಳು ಮತ್ತು ಉನ್ನತ ನಿಯೋಗದೊಂದಿಗೆ ದೆಹಲಿಯಲ್ಲಿದ್ದು, ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಅವರು ಬೆಂಗಳೂರಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ಬಡವರ ಸಂಕಷ್ಟ ನಿವಾರಣೆಗೆ ಪಂಚ ಯೋಜನೆ ಜಾರಿ : ಕುಮಾರಸ್ವಾಮಿ