ವಿವಾಹ ಮಹೋತ್ಸವದಲ್ಲಿ ಚಂಡೆ ಬಾರಿಸಿ ಸಂಭ್ರಮಿಸಿದ ಮಧುಮಗಳು.. ವಿಡಿಯೋ ನೋಡಿ - ಶಿಂಕಾರಿ ಮೇಳಂನಲ್ಲಿ ತರಬೇತಿ
🎬 Watch Now: Feature Video
ತ್ರಿಶೂರ್(ಕೇರಳ): ಮದುವೆ ಅಂದರೆ ಅಲ್ಲಿ ಸಂತೋಷಕ್ಕೆ ಸಾಕಷ್ಟು ಜಾಗವಿರುತ್ತದೆ. ಅದರಲ್ಲೂ ವಧು - ವರರಲ್ಲಿ ಬಹುತೇಕರಿಗೆ ನಮ್ಮ ಮದುವೆ ಹಾಗಿರಬೇಕು, ಹೀಗಿರಬೇಕು ಎಂಬ ಕನಸಿರುತ್ತದೆ. ಕೇರಳದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ಉತ್ಸಾಹದಿಂದ ಚಂಡೆ ಬಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚೆಂಡೆ ನುಡಿಸಿದ ವಧುವಿನ ಹೆಸರು ಶಿಲ್ಪಾ. ಇವರು ಕಳೆದ 8 ವರ್ಷಗಳಿಂದ ಪಾಂಡಿ ಮೇಳಂ, ಪಂಚರಿ ಮೇಳಂ ಮತ್ತು ಶಿಂಕಾರಿ ಮೇಳಂನಲ್ಲಿ ತರಬೇತಿ ಪಡೆದಿದ್ದಾರೆ. ಅಮೆರಿಕದ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಸಹ ನೀಡಿದ್ದಾರಂತೆ. ಕಣ್ಣೂರಿನ ವರ ದೇವಾನಂದ್ ಜೊತೆಗೆ ಶಿಲ್ಪಾರ ಮದುವೆ ತ್ರಿಶೂರಿನ ಗುರುವಾಯೂರು ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆದಿದೆ.
Last Updated : Feb 3, 2023, 8:37 PM IST