ಮೊದಲ ರಾತ್ರಿ ಆಚರಣೆಗೆ ಕೊಠಡಿ ಸೇರಿದ ನವ ದಂಪತಿ ಶವವಾಗಿ ಪತ್ತೆ! ವಿಡಿಯೋ - ಉತ್ತರ ಪ್ರದೇಶದಲ್ಲಿ ನವ ದಂಪತಿ ಸಾವು

🎬 Watch Now: Feature Video

thumbnail

By

Published : Jun 1, 2023, 5:18 PM IST

ಬಹ್ರೈಚ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಹ್ರೈಚ್​ ಜಿಲ್ಲೆಯಲ್ಲಿ ಭಾರಿ ದುರಂತ ನಡೆದಿದೆ. ಇಲ್ಲಿನ ಕೈಸರ್‌ಗಂಜ್ ಪ್ರದೇಶದಲ್ಲಿ ಮೊದಲ ರಾತ್ರಿಯಂದೇ ನವ ವಧು ಮತ್ತು ವರ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ, ಇಬ್ಬರ ಸಾವಿಗೆ ಕಾರಣ ನಿಗೂಢವಾಗಿದೆ.

ಮೃತ ನವ ದಂಪತಿಯನ್ನು ಪ್ರತಾಪ್ (23) ಮತ್ತು ಪುಷ್ಪಾ ಎಂದು ಗುರುತಿಸಲಾಗಿದೆ. ಮೇ 30ರಂದು ಕುಟುಂಬಸ್ಥರು ಸಮ್ಮುಖದಲ್ಲಿ ವಿವಾಹವಾಗಿದ್ದರು. ಮೇ 31ರಂದು ಮೊದಲ ರಾತ್ರಿ ಆಚರಣೆಗೆ ಎಂದು ಮನೆಯ ಕೊಠಡಿ ಸೇರಿದ್ದರು. ಮತ್ತೊಂದೆಡೆ, ಸಂಬಂಧಿಕರೆಲ್ಲ ಊಟ ಮಾಡಿ ನಿದ್ದೆಗೆ ಜಾರಿದ್ದರು. ಇಂದು ಬೆಳಗಾದರೂ ನವ ದಂಪತಿ ಕೊಠಡಿಯ ಬಾಗಿಲು ತೆರೆದಿಲ್ಲ. ಬಾಗಿಲು ಬಡಿದಾಡಿದರೂ ಯಾವುದೇ ಸದ್ದು ಬಂದಿಲ್ಲ. ಇದಾದ ಬಳಿಕ ಮನೆಯವರು ಕಿಟಕಿ ಮೂಲಕ ನೋಡಿದಾಗ ಇಬ್ಬರ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ತಿಳಿಸಿದ್ದಾರೆ.

ಇದರಿಂದ ಆತಂಕದಲ್ಲೇ ಬಾಗಿಲು ಒಡೆದು ಕೊಠಡಿ ಒಳಗೆ ಕುಟುಂಬಸ್ಥರು ಹೋಗಿ ಪರಿಶೀಲನೆ ನಡೆಸಿದಾಗ ಹೊಸ ಜೋಡಿ ಪ್ರತಾಪ್ ಮತ್ತು ಪುಷ್ಪಾ ಇಬ್ಬರ ಉಸಿರು ನಿಂತಿರುವುದು ಪತ್ತೆಯಾಗಿದೆ. ಇದರ ಮಾಹಿತಿ ಪಡೆದ ವಧುವಿನ ಕುಟುಂಬಸ್ಥರು ದೌಡಾಯಿಸಿದ್ದಾರೆ. ನಂತರ ಕುಟುಂಬಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆಗ ಪ್ರಭಾರಿ ಇನ್ಸ್‌ಪೆಕ್ಟರ್ ರಾಜನಾಥ್ ಸಿಂಗ್ ಮತ್ತು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯ ಇಬ್ಬರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಕೊಠಡಿಯಲ್ಲಿ ಸಮೋಸ, ತಂಪು ಪಾನೀಯದ ಬಾಟಲಿಗಳು ಪತ್ತೆಯಾಗಿವೆ. ಈ ಕುರಿತು ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಕಮಲೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಳಲಿದ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಪೀಡಿಸಿ ಉಸಿರುಗಟ್ಟಿಸಿ ಕೊಂದ ಪತಿ! 2 ವರ್ಷದ ಮಗ, 1 ತಿಂಗಳ ಮಗಳು ಅನಾಥ!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.