ಔಲಿ ಚಳಿಗಾಲದ ಕ್ರೀಡಾಕೂಟ 2023: ಹೊಸ ದಿನಾಂಕ ಘೋಷಣೆ - ಔಲಿ ವಿಂಟರ್ ಗೇಮ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17665248-thumbnail-4x3-news.jpg)
ಚಮೋಲಿ( ಉತ್ತರಾಖಂಡ): ಔಲಿ ವಿಂಟರ್ ಗೇಮ್ಸ್‌ನ ಹೊಸ ದಿನಾಂಕವನ್ನು ಘೋಷಿಸಲಾಗಿದೆ. ರಾಷ್ಟ್ರೀಯ ಹಿರಿಯ ಮತ್ತು ಕಿರಿಯ ಆಲ್ಪೈನ್ ಸ್ಕೀ ಮತ್ತು ಸ್ನೋಬೋರ್ಡ್ ಚಾಂಪಿಯನ್‌ಶಿಪ್ ಫೆಬ್ರವರಿ 23 ರಿಂದ 26 ರವರೆಗೆ ಔಲಿಯಲ್ಲಿ ನಡೆಯಲಿದೆ. ಸ್ಕೀಯಿಂಗ್ ಮತ್ತು ಸ್ನೋಬೋರ್ಡ್ ಕಾರ್ಯದರ್ಶಿ ಪ್ರವೀಣ್ ಶರ್ಮಾ ಅವರು ಅಧಿಕೃತವಾಗಿ ಕ್ರೀಡಾಕೂಟದ ದಿನಾಂಕವನ್ನು ಘೋಷಿಸಿದ್ದಾರೆ.
ಈ ಹಿಂದೆ ಔಲಿ ಚಳಿಗಾಲದ ಕ್ರೀಡಾಕೂಟವನ್ನು ಫೆಬ್ರವರಿ 2 ರಿಂದ ಫೆಬ್ರವರಿ 8 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಜೋಶಿಮಠದಲ್ಲಿನ ಭೂಕುಸಿತದಿಂದಾಗಿ ದಿನಾಂಕವನ್ನು ಮುಂದೂಡಲಾಗಿತ್ತು. ಔಲಿ ವಿಂಟರ್ ಗೇಮ್ಸ್ ಸುರಕ್ಷಿತ ಚಾರ್ದಾಮ್ ಯಾತ್ರೆಯ ಸಂದೇಶವನ್ನು ನೀಡುತ್ತದೆ. ಜೊತೆಗೆ ಪ್ರವಾಸೋದ್ಯಮಕ್ಕೆ ಚಳಿಗಾಲದ ಕ್ರೀಡಾಕೂಟವನ್ನು ಆಯೋಜಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಜೋಶಿಮಠದ ಅನಾಹುತದ ಬಗ್ಗೆ ದೇಶ-ವಿದೇಶದ ಜನರಲ್ಲಿ ಮೂಡಿರುವ ಭಯ ಈ ಕ್ರೀಡಾಕೂಟಗಳ ಆಯೋಜನೆ ಬಳಿಕ ದೂರವಾಗಲಿದೆ ಎನ್ನಲಾಗುತ್ತಿದೆ.
ಔಲಿ ಚಳಿಗಾಲದ ಕ್ರೀಡಾಕೂಟಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಎಲ್ಲಾ ಸಿದ್ಧತೆ ಮಾಡಲಾಗಿದೆ. 40ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.