ಕೇಂದ್ರ ಸಚಿವೆ ಭಾರತಿ ಪವಾರ್ ತಾಯಿಯ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ - ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ ಭಾರತಿ ಪವಾರ್
🎬 Watch Now: Feature Video
ನಾಸಿಕ್ (ಮಹಾರಾಷ್ಟ್ರ): ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ.ಭಾರತಿ ಪವಾರ್ ಅವರ ತಾಯಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಎಳೆದೊಯ್ದಿರುವ ಘಟನೆ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ.
ಭಾರತಿ ಪವಾರ್ ಅವರ ತಾಯಿ ಶಾಂತಾಬಾಯಿ ಬಾಗುಲ್ ಅವರು ಶನಿವಾರ ಸಂಜೆ 6ರಿಂದ 7ಗಂಟೆ ಸುಮಾರಿಗೆ ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಗೆ ಕೈ ಹಾಕಿ ಕೊರಳಲ್ಲಿದ್ದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ಈ ವೇಳೆ ತಾಯಿ ಶಾಂತಾಬಾಯಿ ಬಾಗುಲ್ ಗಾಬರಿಗೊಂಡಿದ್ದು, ಸುತ್ತ ಮುತ್ತ ಜನರು ಇಲ್ಲದೇ ಇದ್ದುದರಿಂದ ಸಹಾಯಕ್ಕಾಗಿ ಕೂಗಲು ಅವರಿಗೆ ಸಾಧ್ಯವಾಗಿಲ್ಲ. ಈ ಘಟನೆಯಿಂದ ತುಂಬಾ ಭಯಭೀತಗೊಂಡಿರುವುದಾಗಿ ಶಾಂತಾಬಾಯಿ ಹೇಳಿದ್ದಾರೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಳ್ಳತನ, ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಸರಗಳ್ಳತನವಂತೂ ಸಾಮಾನ್ಯವಾಗಿ ಬಿಟ್ಟಿದೆ. ನಾಸಿಕ್ ನಗರದಲ್ಲಿ ದುಷ್ಕೃತ್ಯಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ನಗರದ ಎಲ್ಲಾ ಕಡೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಅಖಿಲೇಶ್ ಯಾದವ್ ಅಪ್ಪಿಕೊಂಡ ರಜನಿಕಾಂತ್: ಭೇಟಿ ಬಗ್ಗೆ 'ತಲೈವಾ' ಹೇಳಿದ್ದೇನು?