ಭಾರತ-ಬ್ರಿಟನ್ ಆಲಿಂಗನ: ರಿಷಿ ಸುನಕ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ

🎬 Watch Now: Feature Video

thumbnail

By

Published : May 21, 2023, 9:23 AM IST

ಜಪಾನ್‌ : ಹಿರೋಷಿಮಾದಲ್ಲಿ ಯುನೈಟೆಡ್ ಕಿಂಗ್‌ಡಂ (ಯುಕೆ) ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ಉಭಯ ನಾಯಕರು ಪರಸ್ಪರ ಆಲಿಂಗನ ಮಾಡಿಕೊಂಡ ದೃಶ್ಯ ಗಮನ ಸೆಳೆಯುತು. "ಬ್ರಿಟಿಷ್​ ಪ್ರಧಾನಿ ಸುನಕ್ ಅವರೊಂದಿಗಿನ ಚರ್ಚೆ ಅತ್ಯಂತ ಫಲಪ್ರದವಾಗಿತ್ತು. ವ್ಯಾಪಾರ, ನಾವೀನ್ಯತೆ, ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತು ನಾವು ಮಾತನಾಡಿದೆವು" ಎಂದು ಮೋದಿ ಹೇಳಿದ್ದಾರೆ.  

ಇದಕ್ಕೂ ಮೊದಲು ಹಿರೋಶಿಮಾದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿ, ಮೋದಿ ಪುಷ್ಪ ನಮನ ಸಲ್ಲಿಸಿದರು. "ಗಾಂಧಿ ಪ್ರತಿಮೆ ಅನಾವರಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಜಪಾನ್ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಬೋಧಿ ವೃಕ್ಷವನ್ನು ಹಿರೋಷಿಮಾದಲ್ಲಿ ನೆಡಲಾಗಿದೆ ಎಂದು ತಿಳಿದು ಸಂತೋಷವಾಯಿತು" ಎಂದು ತಿಳಿಸಿದರು.  

ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯು ಇಂದು ಮುಕ್ತಾಯವಾಗಲಿದೆ. ಶೃಂಗಸಭೆ ಮುಗಿದ ಬಳಿಕ ಮೋದಿ ಪಪುವಾ ನ್ಯೂಗಿನಿ ದೇಶಕ್ಕೆ ತೆರಳಲಿದ್ದಾರೆ. ಆ ಬಳಿಕ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಧಾನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. 

ಇದನ್ನೂ ಓದಿ : ಮೋದಿ, ಜಿ7 ನಾಯಕರಿಂದ ಹಿರೋಷಿಮಾ ಶಾಂತಿ ಸ್ಮಾರಕಕ್ಕೆ ಪುಷ್ಪ ನಮನ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.