thumbnail

By

Published : May 10, 2023, 9:17 AM IST

Updated : May 10, 2023, 9:58 AM IST

ETV Bharat / Videos

'ದಯವಿಟ್ಟು ನಮ್ಮಿಂದ ಕಲಿಯಿರಿ'.. ಯುವ ಮತದಾರರಿಗೆ ಸಂದೇಶ ನೀಡಿದ ಸುಧಾ ಮೂರ್ತಿ

ಜಯನಗರ(ಬೆಂಗಳೂರು): ಜಯನಗರ ಬಿಇಎಸ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ಮತ ಚಲಾಯಿಸಿದರು. ಮತದಾನದ ಬಳಿಕ ಮಾತನಾಡಿದ ಸುಧಾ ಮೂರ್ತಿ  "ದಯವಿಟ್ಟು ನಮ್ಮನ್ನು ನೋಡಿ. ನಾವು ವಯಸ್ಸಾದವರು, ಆದರೆ ನಾವು 6 ಗಂಟೆಗೆ ಎದ್ದು ಇಲ್ಲಿಗೆ ಬಂದು ಮತ ಚಲಾಯಿಸಿದ್ದೇವೆ. ದಯವಿಟ್ಟು ನಮ್ಮಿಂದ ಕಲಿಯಿರಿ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಭಾಗ" ಎಂದು ಯುವ ಮತದಾರರಿಗೆ ಸಂದೇಶ ನೀಡಿದರು. 

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ರಾಜ್ಯಾದ್ಯಂತ ಒಟ್ಟು 58,545 ಮತಗಟ್ಟೆಗಳಿವೆ. 2,258 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 996 ಮಹಿಳೆಯರಿಗಾಗಿ ಪ್ರತ್ಯೇಕ ಸಖಿ ಮತಗಟ್ಟೆಗಳಾಗಿವೆ. ವಿಶೇಷ ಚೇತನರಿಗೆ 239, ಯುವ ಮತದಾರರಿಗೆ 286, ಸ್ಥಳೀಯ ವಿಷಯಾಧಾರಿತ ಒಟ್ಟು 623 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 114 ಬುಡಗಟ್ಟು ಮತದಾರರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷ ಚೇತನ ಮತದಾರರಿಗೆ 45,823 ಗಾಲಿಕುರ್ಚಿ, 46,872 ಭೂತಗನ್ನಡಿ, 1,068 ಸಂಜ್ಞಾ ಭಾಷಾಂತಕಾರರು, ಒಟ್ಟು 54,950 ಸಹಾಯಕರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: 'ಕೋಮುವಾದಿ ರಾಜಕಾರಣದ ವಿರುದ್ಧ ಮತ': ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ವೋಟಿಂಗ್

Last Updated : May 10, 2023, 9:58 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.