ಅಡುಗೆ ಮನೆಯಲ್ಲಿ ಹೆಡೆ ಬಿಚ್ಚಿದ ನಾಗರ ಹಾವು! - ವಿಡಿಯೋ - Arif is an entomologist from Mudigere Taluk
🎬 Watch Now: Feature Video
ಚಿಕ್ಕಮಗಳೂರು: ಅಡುಗೆ ಕೋಣೆಯಲ್ಲಿ ನಾಗರ ಹಾವೊಂದು ಹೆಡೆ ಬಿಚ್ಚಿ ನಿಂತು ಆತಂಕ ಸೃಷ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆಯ ಕೃಷ್ಣಾಪುರದ ನಿವಾಸಿ ಸುಶೀಲ ಎಂಬುವರ ಮನೆಯಲ್ಲಿ ಹಾವು ಪತ್ತೆಯಾಯಿತು. ಅಡುಗೆ ಮಾಡಲು ಹೋಗಿದ್ದಾಗ ಹಾವು ಹೆಡೆ ಬಿಚ್ಚಿದೆ. ಈ ದೃಶ್ಯ ನೋಡಿ ಮನೆ ಮಂದಿ ಅರೆಕ್ಷಣ ಬೆಚ್ಚಿ ಬಿದ್ದಿದ್ದು, ಸ್ಥಳದಿಂದ ಹೊರಬಂದಿದ್ದಾರೆ.
ಕೂಡಲೇ ಮೂಡಿಗೆರೆ ತಾಲೂಕಿನ ಉರಗ ತಜ್ಞ ಆರಿಫ್ ಅವರಿಗೆ ಕುಟುಂಬದವರು ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ತಜ್ಞ ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಸೆರೆ ಹಿಡಿಯಲು ಹೋದಾಗ ಆರಿಫ್ ಮೇಲೂ ಹಾವು ಕೋಪದಿಂದ ಬುಸು ಗುಟ್ಟಿದೆ. ಅಂತಿಮವಾಗಿ ಹಾವು ಸೆರೆ ಹಿಡಿಯುವಲ್ಲಿ ಅವರು ಯಶಸ್ವಿಯಾದರು. ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ಸೆರೆಹಿಡಿದ ನಾಗರನನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಉರಗ ತಜ್ಞರು ಅರಣ್ಯ ಇಲಾಖೆಯ ಸಿಬ್ಬಂದಿಯ ಸಮ್ಮುಖದಲ್ಲಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಎರಡು ಕಡೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆಗಳು: ವಿಡಿಯೋ