ಅಯೋಧ್ಯೆಯಲ್ಲಿ ಅವಧೂತ ದತ್ತ ಪೀಠದ ಶಾಖೆ: ಭೂಮಿಪೂಜೆ ನೆರವೇರಿಸಿದ ಸಚ್ಚಿದಾನಂದ ಸ್ವಾಮೀಜಿ - ಅವಧೂತ ದತ್ತ ಪೀಠದ ಶಾಖೆ
🎬 Watch Now: Feature Video
ಅಯೋಧ್ಯೆ (ಉತ್ತರ ಪ್ರದೇಶ): ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮಿ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಭೂಮಿಪೂಜೆ ನೆರವೇರಿಸಿದರು. ಈ ಆಶ್ರಮವು ಮೈಸೂರಿನ ಅವಧೂತ ದತ್ತ ಪೀಠದ ಶಾಖೆಯಾಗಲಿದ್ದು, ಭಕ್ತರಿಗೆ ತಂಗಲು ಆಶ್ರಮದ ಆವರಣದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.
ರಾಮ ಜನ್ಮಭೂಮಿ ಸಮುಚ್ಚಯದಿಂದ 1 ಕಿಲೋ ಮೀಟರ್ ದೂರದಲ್ಲಿರುವ ಆಶ್ರಮ ನಿರ್ಮಾಣ ಮಾಡಲಾಗುತ್ತಿದೆ. ಇಂದು ವೇದಘೋಷ, ಮಂತ್ರಘೋಷಗಳ ನಡುವೆ ಹವನಪೂಜೆ, ಬಲಿಪೂಜೆ ನಡೆಯಿತು. ಜೊತೆಗೆ ಆಶ್ರಮ ನಿರ್ಮಾಣಕ್ಕಾಗಿ ಯಜ್ಞಕುಂಡ, ಭೂಮಿ ಪೂಜೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮಿ ನೆರವೇರಿಸಿದರು. ಶ್ರೀರಾಮ ಮಂತ್ರ ಮತ್ತು ಹನುಮಾನ್ ಚಾಲೀಸಾ ಸಹ ಪಠಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಭಕ್ತರೂ ಪಾಲ್ಗೊಂಡಿದ್ದರು.
ಅಯೋಧ್ಯೆಯಲ್ಲಿ ನಮ್ಮ ಅವಧೂತ ದತ್ತ ಪೀಠದ ಶಾಖೆಯಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿತ್ತು. ಅದಕ್ಕಾಗಿಯೇ ಸ್ಥಳವನ್ನು ಆಯ್ಕೆ ಮಾಡಿ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮವನ್ನು ನಿರ್ಮಿಸಲಾಗುತ್ತಿದೆ. ಒಂದು ವರ್ಷದಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಈ ಆಶ್ರಮದಲ್ಲಿ ದತ್ತ ಮಂದಿರ ನಿರ್ಮಿಸಲಾಗುತ್ತದೆ. ಇದಲ್ಲದೇ ಭಕ್ತರಿಗೆ ಭಜನೆ ಕೀರ್ತನೆ ಮಾಡಲು ಸ್ಥಳಾವಕಾಶ ಇರುತ್ತದೆ. ವಿಶೇಷವಾಗಿ ದಕ್ಷಿಣ ಭಾರತದಿಂದ ಆಗಮಿಸುವ ರಾಮನ ಭಕ್ತರಿಗೆ ವಸತಿ ಸೌಲಭ್ಯ ಕೂಡ ಇರುತ್ತದೆ ಎಂದು ಸಚ್ಚಿದಾನಂದ ಸ್ವಾಮಿ ತಿಳಿಸಿದರು.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ ಸಂಘರ್ಷದ ವಿಷಯವಾಗಬಾರದು: ಎಸ್.ಜೈಶಂಕರ್