ಇಂದಿನಿಂದ 14 ಆನೆಗಳ ತಾಲೀಮು ಆರಂಭ! - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ಇಂದು ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳು ಒಟ್ಟಿಗೆ ತಾಲೀಮು ನಡೆಸಿದವು. ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಚೈತ್ರ, ಭೀಮ, ಧನಂಜಯ, ಲಕ್ಷ್ಮಿ, ಕಾವೇರಿ, ಗೋಪಾಲಸ್ವಾಮಿ, ವಿಜಯ, ಗೋಪಿ, ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಮಹೇಂದ್ರ ಆನೆಗಳು ಅರಮನೆಯಿಂದ ಹೊರಟು, ಬನ್ನಿಮಂಟಪ ತಲುಪಿದವು. ಇಷ್ಟು ದಿನ ಅಭಿಮನ್ಯು ಮುಂದಾಳತ್ವದಲ್ಲಿ 9 ಆನೆಗಳು ತಾಲೀಮು ನಡೆಸುತ್ತಿದ್ದವು. ಇದರೊಟ್ಟಿಗೆ 5ಹೊಸ ಆನೆಗಳು ಸೇರ್ಪಡೆಗೊಂಡು ಇಂದಿನಿಂದ 14 ಆನೆಗಳು ತಾಲೀಮು ಆರಂಭಿಸಿವೆ.
Last Updated : Feb 3, 2023, 8:27 PM IST