ರಾಮನವಮಿ ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಮರು- ವಿಡಿಯೋ - ರಾಮನವಮಿ ಮೆರವಣಿಗೆಯಲ್ಲಿ ಮುಸ್ಲಿಮರು

🎬 Watch Now: Feature Video

thumbnail

By

Published : Mar 31, 2023, 7:03 AM IST

ಒಡಿಶಾ : ಜಾತಿ ಮತ್ತು ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ದ್ವೇಷದ ಭಾವನೆ ಪ್ರಚೋದಿಸುವ ಸನ್ನಿವೇಶಗಳ ನಡುವೆ ಕೋಮು ಸೌಹಾರ್ದತೆಯನ್ನು ಪ್ರದರ್ಶಿಸುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿವೆ. ನಿನ್ನೆ (ಗುರುವಾರ) ದೇಶಾದ್ಯಂತ ಅದ್ಧೂರಿಯಾಗಿ ಶ್ರೀ ರಾಮನವಮಿ ಆಚರಿಸಲಾಗಿದೆ. ಒಡಿಶಾ ರಾಜ್ಯದ ಭದ್ರಕ್ ಪ್ರದೇಶದಲ್ಲಿ ನಡೆದ ರಾಮನವಮಿ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೂಡಾ ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದರು.

ಇದನ್ನೂ ಓದಿ : ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ.. ಸಂಧ್ಯಾ ಬಜಾರ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ

ಈ ಕುರಿತು ಮಾತನಾಡಿದ ಭದ್ರಕ್ ಪುರಸಭೆ ಅಧ್ಯಕ್ಷೆ ಗುಲ್ಮಕಿ ದಲವ್ಜಿ ಹಬೀಬ್, "ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಈ ಶೋಭಾ ಯಾತ್ರೆಯನ್ನು ಸ್ವಾಗತಿಸಲು ನಾವು ಇಲ್ಲಿಗೆ ಆಗಮಿಸಿದ್ದೇವೆ. ಹಿಂದೂ ಮುಸ್ಲಿಮರೆಂದು ಬೇಧಭಾವ ಮಾಡದೇ ಒಂದಾಗಿ ಹಬ್ಬ ಆಚರಿಸುತ್ತಿದ್ದೇವೆ" ಎಂದು ಹೇಳಿದರು. ನಿನ್ನೆ ಮೈಸೂರಿನಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಪಾನಕ ಮತ್ತು ಕೋಸಂಬರಿ ವಿತರಿಸಿ ಗಮನ ಸೆಳೆದಿದ್ದರು.  

ಇದನ್ನೂ ಓದಿ : ಮೈಸೂರಿನಲ್ಲಿ ಭಾವೈಕ್ಯತೆಯಿಂದ ರಾಮನವಮಿ ಆಚರಣೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.